ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಧಿವಶ
ನವದೆಹಲಿ: ಹಲವು ದಿನಗಳಿಂದ ಕೊರೋನಾ ಪಾಸಿಟಿವ್ ನಿಂದ ಬಳಲುತ್ತಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಚಿಕಿತ್ಸೆ ಫಲಿಸದೇ ಸೇನಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ದೇಶದ ಚತುರ ರಾಜಕಾರಣಿಯಂದೇ ಖ್ಯಾತಿ ಪಡೆದಿದ್ದ ಪ್ರಣಬ್ ಮುಖರ್ಜಿ ಹಲವು ದಿನಗಳಿಂದ ಕೋಮಾ ಸ್ಥಿತಿಯಲ್ಲಿದ್ದರು. ಐಸಿಯುನಲ್ಲಿದ್ದ ಪ್ರಣಬ್ ಮುಖರ್ಜಿ ಈಗಷ್ಟೇ ಸಾವಿಗೀಡಾಗಿದ್ದಾರೆ.
ಕಾಂಗ್ರೆಸ್ ನಲ್ಲಿ ಪ್ರಣಬ್ ಮುಖರ್ಜಿ ಪ್ರಣಬ್ ದಾ ಎಂದೇ ಖ್ಯಾತಿ ಪಡೆದಿದ್ದ ಪ್ರಣಬ್ ಮುಖರ್ಜಿ ನಿಧನ ಹೊಂದಿದ್ದನ್ನ ಪುತ್ರ ಅಭಿಷೇಕ ಖಚಿತಪಡಿಸಿದ್ದಾರೆ. ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲವು ದಿನಗಳಿಂದ ಐಸಿಯುನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು.
ಮಾಜಿ ರಾಷ್ಟ್ರಪತಿ ನಿಧನಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶಾಧ್ಯಂತ ಪ್ರಮುಖರು ಕಂಬನಿ ಮಿಡಿದಿದ್ದಾರೆ.