ಧಾರವಾಡಲ್ಲಿಂದು 199 ಪಾಸಿಟಿವ್- 235 ಗುಣಮುಖ: 2 ಸೋಂಕಿತರ ಸಾವು
ಧಾರವಾಡ ಜಿಲ್ಲೆಯ ಜನರು ಇಂದು ಸ್ವಲ್ಪ ನಿರಾಳವಾಗುವ ಸಂಖ್ಯೆಯನ್ನ ನೋಡಬಹುದು. ಇಂದು ಗುಣಮುಖವಾದ 235 ಜನರಿಗಿಂತ ಕಡಿಮೆ 199 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಇಂದು ಇಬ್ಬರು ಸೋಂಕಿತರು ಸಾವನ್ನಪ್ಪಿದ್ದು ಜಿಲ್ಲೆಯಲ್ಲಿ ಒಟ್ಟು ಕೊರೋನಾ ಪಾಸಿಟಿವ್ ದಿಂದ ತೀರಿಕೊಂಡವರ ಸಂಖ್ಯೆ 327ಕ್ಕೇರಿದೆ. ಜಿಲ್ಲೆಯಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 11526ಕ್ಕೇರಿದೆ. ಆಸ್ಪತ್ರೆಯಿಂದ ಗುಣಮುಖರಾದ ಇಂದಿನ ಸಂಖ್ಯೆ 235 ಹಿಡಿದು ಒಟ್ಟು ಗುಣಮುಖರಾದವರ ಸಂಖ್ಯೆ 8900ಕ್ಕೇರಿದೆ.