ಗೃಹ ಸಚಿವರು ‘ಸಿಓಪಿ’ಗೆ ವಾರ್ನ್ ಕೊಟ್ಟ ಮೂರನೇಯ ದಿನಕ್ಕೆ ಡಿಜಿಪಿ ವಾಣಿಜ್ಯನಗರಿಗೆ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಏನೇ ಕ್ರೈಂ ನಡೆದರೂ ನೀವೇ ಜವಾಬ್ದಾರಿ. ಒಂದು ವಾರ ಟೈಮ್ ಕೊಟ್ಟಿದ್ದೇನೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿ ಇನ್ನೂ ಮೂರು ದಿನವಾಗಿಲ್ಲ, ಅಷ್ಟರಲ್ಲೇ ಪೊಲೀಸ್ ಮಹಾನಿರ್ದೇಶಕರು ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ.
ಬೆಳಿಗ್ಗೆ ಹುಬ್ಬಳ್ಳಿಗೆ ಆಗಮಿಸುವ ಪೊಲೀಸ್ ಮಹಾನಿರ್ದೇಶಕ ಪ್ರವೀಣ ಸೂದ್, ಹತ್ತು ಗಂಟೆಗೆ ಕಮೀಷನರೇಟ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವ್ಯಾಪ್ತಿಯ ಸಭೆ ನಡೆಸಲಿದ್ದಾರೆ.
ಇದಾದ ನಂತರ ಮಧ್ಯಾಹ್ನ ಗದಗಗೆ ತೆರಳಲಿದ್ದಾರೆ. ಗೃಹ ಸಚಿವ ಪೊಲೀಸ್ ಆಯುಕ್ತ ಆರ್.ದಿಲೀಪ ಅವರಿಗೆ ಖಡಕ್ ವಾರ್ನಿಂಗ್ ನೀಡಿದ್ದರು. ಕಚೇರಿಯಲ್ಲಿ ಕೂತು ಕಾಗದದ ಮೇಲೆ ಆದೇಶ ಮಾಡಿ ಕೂಡುವುದನ್ನ ಬಿಟ್ಟು ಹೊರಗೆ ಬಂದು ಕೆಲಸ ಮಾಡಿ ಎಂದಿದ್ರು.
ಅವಳಿನಗರಕ್ಕೆ ಬೇರೆ ಕಡೆಯಿಂದ ಕಿಲ್ಲರಗಳು ಬರುತ್ತಿರುವುದನ್ನ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಜರುಗಿಸುವಂತೆಯೂ ಎಚ್ಚರಿಸಿದ್ದರು.
ಸ್ವತಃ ಗೃಹ ಸಚಿವರೇ ನಾನೇ ನಿಗಾ ವಹಿಸುತ್ತೇನೆ ಎಂದು ಹೇಳುವಷ್ಟರ ಮಟ್ಟಿಗೆ ಇಲಾಖೆಯ ಕಾರ್ಯ ಸಚಿವರಿಗೆ ಅಸಮಾಧಾನ ಮೂಡಿಸಿತ್ತು.
ಇದಾದ ಮೂರನೇಯ ದಿನಕ್ಕೆ ಪೊಲೀಸ್ ಮಹಾನಿರ್ದೇಶಕರು ನಗರಕ್ಕೆ ಬರುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ.