2ಕೋಟಿ-94ಲಕ್ಷ-50 ಸಾವಿರ ಸಿಕ್ಕಿದೆಲ್ಲಿ: ಎಲ್ಲಿಗೆ ಹೊರಟಿತ್ತೀಷ್ಟು ಹಣ..?
1 min readಕೋಲಾರ: ಕೊರೋನಾ ಸಮಯದಲ್ಲಿ ಹಲವರು ಹಲವು ರೀತಿಯಲ್ಲಿ ಸಂಕಷ್ಟ ಅನುಭವಿಸುತ್ತಿದ್ದರೂ ಕೆಲವರು ಮಾತ್ರ ಹಣವನ್ನ ಅತ್ತಿಂದಿತ್ತು ಇತ್ತಿಂದತ್ತ ಸಾಗಿಸುವುದರಲ್ಲೇ ದಿನಗಳನ್ನ ಕಳೆಯುತ್ತಿದ್ದಾರೆಂದು ಸಾಕ್ಷಿ ಸಮೇತ ಸಿಕ್ಕಿಬಿದ್ದ ಘಟನೆ ನಡೆದಿದ್ದು, ಕೊರೋನಾ ಸಮಯದಲ್ಲಿನ ಕರಾಳ ಮಾಹಿತಿಯಿದು..
ದಾಖಲೆಯಿಲ್ಲದೇ ಸಾಗಿಸುತ್ತಿದ್ದ 2 ಕೋಟಿ 94 ಲಕ್ಷ 50 ಸಾವಿರ ರೂಪಾಯಿ ಹಣವನ್ನ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರೋಜರನಹಳ್ಳಿ ಬಳಿ ಜಪ್ತಿ ಮಾಡಲಾಗಿದ್ದು, ಹಣ ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ತೆಗೆದುಕೊಂಡಿದ್ದಾರೆ.
ಕೆಎ 07, ಎಂ 7123 ನಂಬರ್ ನ ಶಿಫ್ಟ್ ಕಾರ್ ನಲ್ಲಿ ಮೂವರು ಹೊರಟಿದ್ದರು. ಖಚಿತ ಮಾಹಿತಿಯ ಮೇರೆ ಮೂವರು ಪೊಲೀಸ್ ಅಧಿಕಾರಿಗಳು ಕಾರನ್ನ ಚೇಸ್ ಮಾಡಿದಾಗ ಓರ್ವ ಕಾರು ನಿಲ್ಲಿಸಿ ಪರಾರಿಯಾಗಿದ್ದು, ಇಬ್ಬರನ್ನ ಶ್ರೀನಿವಾಸಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆಂದ್ರದ ಕಡೆಗೆ ಹೊರಟಿದ್ದ ಕಾರಿನಲ್ಲಿ ಕೋಲಾರ ಮೂಲದ ಚಂದ್ರಶೇಖರ್ ಹಾಗೂ ಅಮರನಾಥ್ ಹಣವನ್ನ ಸಾಗಿಸುತ್ತಿದ್ದರು. ಯಾವುದೇ ದಾಖಲೆಗಳು ಇಲ್ಲದ ಕಾರಣದಿಂದ ಈ ಹಣ ಎಲ್ಲಿಂದ ಯಾರಿಗೆ ತೆಗೆದುಕೊಂಡು ಹೋಗುತ್ತಿರುವುದರ ಬಗ್ಗೆ ಅನುಮಾನ ಮೂಡಿದೆ. ಕೊರೋನಾ ಸಮಯದಲ್ಲಿ ಇಷ್ಟೊಂದು ಹಣದ ಗೋಲ್ ಮಾಲ್ ನಡೆಯುತ್ತಿದೇಯಾ ಎಂಬ ಸಂಶಯ ಬಂದಿದ್ದು, ಪೊಲೀಸರು ರಾತ್ರೋರಾತ್ರಿ ತೀವ್ರ ವಿಚಾರಣೆ ನಡೆಸಿದ್ದಾರೆ.