ಸೌಲಭ್ಯ ಕೊಡದ ಇಲಾಖೆ: ಬೇಸತ್ತು ಡಿಪೋದ ಬಳಿಯ ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಚಾಲಕ

ಹಾವೇರಿ: ನಿವೃತ್ತಿಯಾದರೂ ತನಗೆ ನೀಡಬೇಕಾದ ಸೌಲಭ್ಯಗಳನ್ನು ನೀಡಲಿಲ್ಲವೆಂದು ಬೇಸರಿಸಿಕೊಂಡ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಹೊಟೇಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಸ್ಥಳದಲ್ಲಿ ಏನು ನಡೆಯುತ್ತಿದೆ ಗೊತ್ತಾ.. ಇಲ್ಲಿದೆ ವೀಡಿಯೋ
ಹಾವೇರಿ ಡಿಪೋದಲ್ಲಿಯೇ ಕಾರ್ಯನಿರ್ವಹಣೆ ಮಾಡುತ್ತಿದ್ದ ಚಾಲಕ ಶಿವಪ್ರಕಾಶ ಹೂಗಾರ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಗರದ ಹೊರವಲಯದಲ್ಲಿನ ಡಿಪೋದ ಬಳಿಯಿರುವ ಹೊಟೇಲ್‌ನಲ್ಲಿ ಸಾವಿಗೆ ಶರಣಾಗಿದ್ದು, ಕುಟುಂಬದ ಸದಸ್ಯರು ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.