ಸಬ್ ಇನ್ಸ್ ಪೆಕ್ಟರ್ ‘ಶಿಕ್ಷಕ’- ಬೆಳ್ಳಂಬೆಳಿಗ್ಗೆ ಸಚಿವ ಸುರೇಶಕುಮಾರ ನೋಡಿದ್ದೇನು- ನಡೆದದ್ದೇನು

ಬೆಂಗಳೂರು: ಅಲ್ಲೊಂದು ಬೋರ್ಡ್. ಬೋರ್ಡನಲ್ಲಿ ಪಾಠ ಭೋದನೆ. ಹಾಗೇ ನೋಡಿದ್ರೇ ಅಲ್ಯಾರು ಶಿಕ್ಷಕರು ಕಾಣಿಸ್ತಾನೆ ಇಲ್ಲ. ಖಾಕಿ ಹಾಕಿಕೊಂಡವರ ಬೋರ್ಡ್ ಮುಂದೆ ನಿಂತು ವಿವರಣೆ ಕೊಡ್ತಿದ್ದಾರೆ. ಇದೇನಪ್ಪಾ ಇದು ಎಂದು ಪಕ್ಕದಲ್ಲಿ ಹೋಗಿ ನೋಡಿದ್ರೇ, ಸಬ್ ಇನ್ಸ್ ಪೆಕ್ಟರೋಬ್ಬರು ಡ್ಯೂಟಿಗೆ ಹೋಗುವ ಮುನ್ನ ಬಡ ಮಕ್ಕಳಿಗೆ ಪಾಠ ಮಾಡ್ತಿದ್ದಾರೆ..
ಹೌದು.. ಇಂತಹದೊಂದು ಘಟನೆಯನ್ನ ಸ್ವತಃ ಶಿಕ್ಷಣ ಸಚಿವ ಸುರೇಶಕುಮಾರ ಹಂಂಚಿಕೊಂಡಿದ್ದಾರೆ. ಆ ಇಡೀ ಘಟನೆಯನ್ನ ತಮ್ಮ ಸೋಷಿಯಲ್ ಮೀಡಿಯಾ ಪೇಜ್ ದಲ್ಲಿ ಹಾಕಿಕೊಂಡಿದ್ದಾರೆ. ಸಚಿವ ಸುರೇಶಕುಮಾರ ಏನಂದೇ ಬರೆದುಕೊಂಡಿದ್ದಾರೆಂಬುದು ಇಲ್ಲಿದೆ ನೋಡಿ..
ಇಂದು ಬೆಳಬೆಳಗ್ಗೆಯೇ ನನಗೆ ಆಶ್ಚರ್ಯ ಮತ್ತು ಸ್ಫೂರ್ತಿ ತಂದ ಘಟನೆ ಯನ್ನು ತಮ್ಮೆಲ್ಲರ ಜೊತೆ ಹಂಚಿಕೊಳ್ಳಲು ಬಯಸುತ್ತೇನೆ.
ಬೆಳಿಗ್ಗೆ ಏಳಕ್ಕೇ ನಾಗರಬಾವಿ ವ್ಯಾಪ್ತಿಯ ವಿನಾಯಕ ನಗರ 9ನೇ ಬ್ಲಾಕ್ ನಲ್ಲಿರುವ ಸ್ಲಂ ಪ್ರದೇಶಕ್ಕೆ ಹೋಗಿದ್ದೆ. ಕಟ್ಟಡ ಕಾರ್ಮಿಕರ ಕುಟುಂಬಗಳಿಂದ ಕೂಡಿರುವ ಪ್ರದೇಶವಿದು.
ಅಲ್ಲಿ ಅನ್ನಪೂರ್ಣೇಶ್ವರಿ ನಗರ #ಪೊಲೀಸ್ಠಾಣೆಯಸಬ್ಇನ್ಸ್ಪೆಕ್ಟರ್ಶಾಂತಪ್ಪ_ಜಡಮ್ಮನವರ್ ಎಂಬುವರು ಆ ಸ್ಲಂ ಪ್ರದೇಶದ ಬಡಕುಟುಂಬಗಳ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದ ದೃಶ್ಯ ನನ್ನ ಹೃದಯ ಮುಟ್ಟಿತು.
ಮೂರನೇ ತರಗತಿಯಿಂದ ಏಳನೇ ತರಗತಿಗಳ ಮಕ್ಕಳಿಗೆ ಗಣಿತ ಹಾಗೂ ಸಾಮಾನ್ಯ ಜ್ಞಾನದ ವಿಷಯಗಳನ್ನು ಶಾಂತಪ್ಪ ಹೇಳಿಕೊಡುತ್ತಿದ್ದಾರೆ.
ಸುಮಾರು ಹದಿನೈದು ದಿನಗಳಿಂದ ಈ ಪೊಲೀಸ್ ಅಧಿಕಾರಿ ತನ್ನ ಈ ಕಾಯಕದಲ್ಲಿ ತೊಡಗಿದ್ದಾರೆ.
ಆ ಮಕ್ಕಳೊಂದಿಗೆ ಮಾತನಾಡಿ ಕೆಲ ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನೂ ಪಡೆದುಕೊಂಡೆ.
ಈ ರೀತಿ ಮಾಡುವ ಯೋಚನೆ ನಿಮಗೆ ಹೇಗೆ ಬಂತು ಎಂದು ಕೇಳಿದ್ದಕ್ಕೆ ಶಾಂತಪ್ಪ ಕೊಟ್ಟ ಉತ್ತರ
“ಸರ್. ನಾನು ಸಹ ಒಬ್ಬ ಬಳ್ಳಾರಿಯ migrant labourer ಮಗ.
ನನಗೆ ಈ ಕಷ್ಟ ಎಲ್ಲಾ ಗೊತ್ತಿದೆ. ಅದಕ್ಕಾಗಿ ಈ ಕಾರ್ಯದಲ್ಲಿ ತೊಡಗಿದ್ದೇನೆ. ಪ್ರತಿದಿನ ಠಾಣೆಗೆ ಕರ್ತವ್ಯಕ್ಕೆ ಹೋಗುವ ಮುನ್ನ ಈ ಕೆಲಸ ಮುಗಿಸಿ ಹೋಗುತ್ತೇನೆ” ಎಂದು.
ನನಗೆ ನಿಜಕ್ಕೂ ಪೊಲೀಸ್ ಅಧಿಕಾರಿಯ ಮೇಲೆ ತುಂಬು ಹೆಮ್ಮೆ ಬಂದಿದೆ. ಕೇವಲ ಕೆಟ್ಟ ಕಾರಣಗಳೇ ಸುದ್ದಿ ಮಾಡುವ ಈ ದಿನಗಳಲ್ಲಿ ಇಂತಹ ಪ್ರಸಂಗಗಳು ಪೊಲೀಸ್ ಇಲಾಖೆಯ ಗರಿಮೆಯನ್ನು ಹೆಚ್ಚಿಸುತ್ತದೆ.
ನಾನು ಅಲ್ಲಿನ ಎಲ್ಲ ಕುಟುಂಬಗಳ ಜೊತೆ ಮಾತಾಡಿ ಯಾವುದೇ ಕಾರಣಕ್ಕೂ ಮಕ್ಕಳ ಶಿಕ್ಷಣ ಅರ್ಧಕ್ಕೆ ನಿಲ್ಲಿಸಬಾರದು ಹಾಗೂ ಯಾವುದೇ ಕಾರಣಕ್ಕೂ ಹೆಣ್ಣುಮಕ್ಕಳಿಗೆ ಬೇಗ ವಿವಾಹ ಮಾಡಬಾರದು ಎಂದು ಪ್ರಮಾಣ ಮಾಡಿಸಿಕೊಂಡಿದ್ದೇನೆ
ಇಂತಹ ಮಾನವೀಯ ಹೃದಯದಿಂದ ಉತ್ತಮ ಸೇವೆ ಮಾಡುತ್ತಿರುವ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಶಾಂತಪ್ಪ ಜಣಮ್ಮನವರ್ ರಿಗೆ ನನ್ನದೊಂದು #ಸಲ್ಯೂಟ್.