15% ಜನರಿಗೆ ಆನ್ ಲೈನ್ ಮದ್ಯ ಮಾರಾಟದಿಂದ ಅನುಕೂಲ: ಶಾಸಕ ಬೆಲ್ಲದವರೇ ನೋಡಿ ಇದನ್ನ..
1 min readಕೋಲಾರ: ಆನ್ ಲೈನ್ ಮದ್ಯ ಮಾರಾಟವನ್ನ ತರಾತುರಿಯಲ್ಲಿ ಆರಂಭ ಮಾಡಲ್ಲ. ಅದಕ್ಕಾಗಿ ಬೇರೆ ಬೇರೆ ರಾಜ್ಯಗಳಲ್ಲಿ ನಡೆಯುತ್ತಿರುವ ವ್ಯವಸ್ಥೆಯ ಬಗ್ಗೆ ಸಮಗ್ರ ಅಧ್ಯಯನ ನಡೆಸಬೇಕಾಗಿದೆ ಎಂದು ಅಬಕಾರಿ ಸಚಿವ ನಾಗೇಶ ಹೇಳಿದರು.
ಮದ್ಯ ಮರಾಟವನ್ನೇ ನಿಷೇಧ ಮಾಡಬೇಕೆಂದು ಹಲವರು ಒತ್ತಾಯ ಮಾಡುತ್ತಿರುವ ಸಮಯದಲ್ಲೇ ಸರಕಾರದ ಮದ್ಯವನ್ನ ಮನೆ ಮನೆಗೂ ತಲುಪಿಸಲು ಪ್ರಯತ್ನ ಮಾಡುತ್ತಿರುವುದು ಗೊತ್ತಾಗುತ್ತಿದೆ.
ಆನ್ ಲೈನ್ ನಲ್ಲಿ ಮದ್ಯ ಮಾರಾಟ ಮಾಡಲು ಹಲವು ಸಂಸ್ಥೆಗಳು ಈಗಾಗಲೇ ಬೇಡಿಕೆ ಇಟ್ಟಿದೆ. ನಾನು ಎಲ್ಲರಿಗೂ ಕಾಯಿರಿ ಎಂದಷ್ಟೆ ತಿಳಿಸಿದ್ದೇನೆ ಎಂದು ಸಚಿವರು ಹೇಳಿದ್ದಾರೆ. ಅಂದರೇ, ಸಚಿವರು ಕೂಡಾ ಬಗ್ಗೆ ಸ್ಪಷ್ಟವಾದ ನಿರ್ಧಾರಕ್ಕೆ ಬರದಿರುವುದು ಗೊತ್ತಾಗುತ್ತೆ.
ಮುಂದುವರೆದು ಮಾತನಾಡಿರುವ ಸಚಿವ ನಾಗೇಶ, ಬಾರ್ ಅಸೋಸಿಯೇಷನ್ ಈಗಾಗಲೇ ಆನ್ ಲೈನ್ ಮಾರಾಟಕ್ಕೆ ವಿರೋಧಿಸಿದೆ. ಆನ್ ಲೈನ್ ಮದ್ಯ ಮಾರಾಟದಿಂದ ಶೇ 15 ರಷ್ಟು ಜನರಿಗೆ ಉಪಯೋಗ ಆಗುತ್ತೆ. ಆನ್ ಲೈನ್ ಮಾರಾಟ ಆದಾಯ ಹೆಚ್ಚಿಸಲು ಮಾಡಿರೊ ಯೋಜನೆಯಲ್ಲ. ಎಲ್ಲಾ ಆಯಾಮಗಳಲ್ಲೂ ಚಿಂತನೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದೆಂದು ಕೋಲಾರ ಡಿಸಿ ಕಚೇರಿಯಲ್ಲಿ ಸಚಿವ ಎಚ್ ನಾಗೇಶ್ ಹೇಳಿದರು.
ಧಾರವಾಡದ ಶಾಸಕ ಅರವಿಂದ ಬೆಲ್ಲದ ದೇಶಾಧ್ಯಂತರ ಮದ್ಯ ಮಾರಾಟ ನಿಷೇಧ ಮಾಡುವಂತೆ ಜನಾಂದೋಲನ ರೂಪಿಸುವುದಾಗಿ ಹೇಳಿದ್ದರು. ಅವರದ್ದೇ ಪಕ್ಷ 15% ಜನರಿಗೆ ಆನ್ ಲೈನ್ ಮೂಲಕ ಮದ್ಯ ಸರಬರಾಜು ಮಾಡಿದ್ರೇ ಉಪಯೋಗ ಆಗುತ್ತೆ ಎಂದು ಹೇಳುತ್ತಿದ್ದಾರೆ. ಈಗಲೂ ಶಾಸಕ ಅರವಿಂದ ಬೆಲ್ಲದ ಜನಾಂದೋಲನ ಮಾಡಲು ಮುಂದಾಗ್ತಾರಾ ಕಾದು ನೋಡಬೇಕಿದೆ.