ಪ್ರೂಟ್ ಇರ್ಫಾನ್ ನಿಮಗೆ ಅನ್ಯಾಯ ಮಾಡಿದ್ದಾನಾ: 12 ಗಂಟೆಗೆ ಎಸಿಪಿ ಕಚೇರಿಗೆ ಬನ್ನಿ
        ಧಾರವಾಡ: ಶಹರ ಠಾಣೆಯ ವ್ಯಾಪ್ತಿಯ ವಿಳಾಸ ಹೊಂದಿದ್ದ ಇರ್ಫಾನ್ ಹಂಚಿನಾಳ ಅಲಿಯಾಸ್ ಪ್ರೂಟ್ ಇರ್ಫಾನ್ ಕೊಲೆಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದರೆ, ಹೊಸ ವಿಚಾರವೇನೇಂದರೇ ಈತನಿಂದ ಅನ್ಯಾಯಕ್ಕೆ ಒಳಗಾದವರಿದ್ದರೇ ಪೊಲೀಸರಿಗೆ ಮಾಹಿತಿ ಕೊಡುವಂತೆ ಪೊಲೀಸ್ ಆಯುಕ್ತರು ಲಿಖಿತವಾಗಿ ಕೇಳಿಕೊಂಂಡಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟನೆಯನ್ನ ಹೊರಡಿಸಿರುವ ಪೊಲೀಸ್ ಆಯುಕ್ತ್ ಆರ್.ದಿಲೀಪ, ಇರ್ಫಾನ್ ಬಗ್ಗೆ ಸಹಾನುಭೂತಿ ಇದ್ದರೂ ಬನ್ನಿ ಎಂದಿದ್ದಾರೆ. ಪ್ರೂಟ್ ಇರ್ಫಾನ್ ಮತ್ತು ಈತನ ಸಹಚರರು ಸಾರ್ವಜನಿಕರಲ್ಲಿ ಮೋಸ ಮಾಡಿ ಭೂ ಕಬಳಿಕೆ ಮಾಡಿದ ಬಗ್ಗೆ, ಧಮಕಿಯಿಂದ ಹಣ ಪಡೆದುಕೊಂಡಿದ್ದರೇ ಹಾಗೂ ಯಾವುದೇ ರೀತಿಯ ತೊಂದರೆಯಾಗಿದ್ದರೇ ಅಥವಾ ಹೆದರಿಕೆಯಿಂದ ದೂರು ನೀಡದೇ ಇದ್ದರೇ ಇಂದು 12 ಗಂಟೆಗೆ ಅಹವಾಲು ನೀಡಬಹುದಾಗಿದೆ.
ಧಾರವಾಡದ ಎಸಿಪಿ ಕಚೇರಿಗೆ ಆಗಮಿಸಿ ನಿಮ್ಮ ತೊಂದರೆಯನ್ನ ಹೇಳಿ. ನಿಮ್ಮ ಹೆಸರುಗಳನ್ನ ಗೌಫ್ಯವಾಗಿ ಈಡಲಾಗುವುದೆಂಬ ಭರವಸೆಯನ್ನೂ ಪೊಲೀಸ್ ಆಯುಕ್ತರು ನೀಡಿದ್ದಾರೆ. ಹೀಗಾಗಿ ಇಂತಹದರ ಲಾಭವನ್ನ ನೊಂದವರು ಪಡೆದುಕೊಳ್ಳಬೇಕಿದೆ.
                      
                      
                      
                      
                      
                        
