ಧಾರವಾಡ ಜಿಲ್ಲೆಯಲ್ಲಿ ಆದರ್ಶ ‘ಸಿಪಿಐ’: ಮಗಳ ಬರ್ತಡೇಯಂದು ಏನ್ಮಾಡಿದ್ದಾರೆ ಗೊತ್ತಾ..!

ಧಾರವಾಡ: ಪೊಲೀಸರು ಎಂದರೇ ಬಹುತೇಕರು ತಮ್ಮದೇ ದೃಷ್ಟಿಯಲ್ಲಿ ನೋಡಿ ಮುಂದೆ ನಡೆಯುವವರೇ ಹೆಚ್ಚು. ಅದಕ್ಕೆ ಕಾರಣಗಳು ಹಲವು. ಆದರೆ, ಎಲೆಮರೆ ಕಾಯಿಯಂತೆ ಯಾರಿಗೂ ಗೊತ್ತಾಗದ ಹಾಗೇ ಸಮಾಜದಲ್ಲಿ ಉತ್ತಮರಾಗಿ ಸೇವೆ ಮಾಡುತ್ತಲೇ ಬರುತ್ತಿರುವ ಸಾವಿರಾರೂ ಪೊಲೀಸರು ಯಾರಿಗೂ ಗೊತ್ತಾಗುವುದೇ ಇಲ್ಲ. ಪೊಲೀಸರ ಬಗ್ಗೆ ಹರಡುವ ಕೆಟ್ಟ ಸುದ್ದಿಗಳ ನಡುವೆ ಒಳ್ಳೆಯದಕ್ಕೆ ಅವಕಾಶವೂ ಇರೋದಿಲ್ಲ ಬಿಡಿ. ಆದರೆ, ಕರ್ನಾಟಕವಾಯ್ಸ್.ಕಾಂ ಒಳ್ಳೆಯ ಪೊಲೀಸರ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪುವ ಪ್ರಯತ್ನವನ್ನ ಮುಂದುವರೆಸುತ್ತಲೇ ಇರುತ್ತದೆ. ಕೊರೋನಾ ಸಮಯದಲ್ಲಿಯೂ ವೃತ್ತ ನಿರೀಕ್ಷಕರು (ಸಿಪಿಐ) ಹೇಗೆ ನಡೆದುಕೊಂಡಿದ್ದಾರೆ ನೋಡಿ. ಬಹುತೇಕರು ತಮ್ಮ ಮಕ್ಕಳನ್ನ ಹೊರಗೆ ಬಿಡಲು ಭಯ ಬೀಳುತ್ತಾರೆ, ಆದ್ರೆ.. ಈ ಇನ್ಸಪೆಕ್ಟರ್ ಏನು ಮಾಡಿದ್ದಾರೆ ಎಂಬುದನ್ನ ಪೂರ್ಣವಾಗಿ ಓದಿ.
ಧಾರವಾಡ ಜಿಲ್ಲೆಯ ನವಲಗುಂದ ಠಾಣೆಯ ವೃತ್ತ ನಿರೀಕ್ಷಕ ಚಂದ್ರಶೇಖರ ಮಠಪತಿ ಅವರು ತಮ್ಮ ಮಗಳ ಬರ್ತಡೇಯನ್ನ ವಿಶಿಷ್ಟವಾಗಿ ಆಚರಣೆ ಮಾಡಿದ್ದಾರೆ. ಪ್ರತಿವರ್ಷವೂ ಒಂದಿಲ್ಲಾ ಒಂದು ರೀತಿಯಲ್ಲಿ ಸಹಾಯ ಮಾಡುವ ಮನಸ್ಥಿತಿಯನ್ನ ಹೊಂದಿರುವ ಸಿಪಿಐ ಕಾರ್ಯ ಎಲ್ಲರಲ್ಲು ಗೌರವ ಮೂಡಿಸಿದೆ.
ತಮ್ಮ ಹತ್ತು ವರ್ಷದ ಮಗಳು ಸಿಂಚನಾಳ ಇಷ್ಟದಂತೆ ನವಲಗುಂದ ಪಟ್ಟಣದಲ್ಲಿ ಹಲವರಿಗೆ ತಮ್ಮಿಂದಾದ ಸಹಾಯವನ್ನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಆದ್ರೆ, ಈ ವಿಷಯವನ್ನ ಯಾರಿಗೂ ಗೊತ್ತಾಗದ ಹಾಗೇ ಮಾಡಿ ಮುಗಿಸಿದ್ದಾರೆ. ಸಣ್ಣ ಪ್ರಚಾರಕ್ಕೂ ಮನಸ್ಸು ಮಾಡಿದಿರುವುದು ಚಂದ್ರಶೇಖರವರ ದೊಡ್ಡಗುಣ.
ಪೊಲೀಸರಲ್ಲಿಯೂ ಮಾನವೀಯತೆ, ಜನರನ್ನ ಗೌರವಿಸುವ ಪ್ರೀತಿಯಿರತ್ತೆ. ಆದರೆ, ಮಾಡುವ ಕೆಲಸವನ್ನ ಪ್ರಚಾರಕ್ಕೆ ಬಳಸಿಕೊಳ್ಳುವುದಿಲ್ಲ ಹಾಗಾಗಿ ಅವರ ಬಗ್ಗೆ ಕೆಲವು ಕೆಟ್ಟ ಪ್ರಚಾರಗಳೇ ನಡೆದಿರುತ್ತವೆ. ಇನ್ನೂ ಮುಂದಾದರೂ ಪೊಲೀಸರ ಬಗ್ಗೆ ಅಸಡ್ಡೆಯಿಂದ ಮಾತನಾಡುವುದನ್ನ ಬಿಡಿ, ಅವರನ್ನೂ ಗೌರವಿಸಿ ಪ್ರೀತಿಸಿ.. ಸಿಂಚನಾ ಹ್ಯಾಪಿ ಬರ್ತಡೇ..