ಹುಬ್ಬಳ್ಳಿ: ದಿವಟೆಗಲ್ಲಿಯಲ್ಲಿ ಮಾರಾಮಾರಿ- 9ಜನರ ಬಂಧನ- ಪಾಸಿಟಿವ್ ಆತಂಕ..!

ಹುಬ್ಬಳ್ಳಿ: ಆಟೋ ನಿಲ್ಲಿಸುವ ಸಂಬಂಧ ಆಗಾಗ ನಡೆಯುತ್ತಿದ್ದ ಜಗಳ ಮತ್ತೆ ನಿನ್ನೆ ರಾತ್ರಿ ಮರುಕಳಿಸಿ, ಎರಡು ಗುಂಪುಗಲು ಬಡಿದಾಡಕೊಂಡ ಘಟನೆ ಗವಳಿಗಲ್ಲಿಯಲ್ಲಿ ಸಂಭವಿಸಿದೆ.
ಉಪ್ಪಾರ ಮತ್ತು ದಿವಟೆ ಕುಟುಂಬದ ನಡುವೆ ಮಾರಾಮಾರಿ ನಡೆದಿದ್ದು, ಬೇರೆ ಭಾಗದಿಂದಲೂ ಕೆಲವರು ಬಂದು ಹೊಡೆದಾಡಿಕೊಂಡಿದ್ದಾರೆ. ಗಣೇಶ ಹಬ್ಬದ ಸಮಯದಲ್ಲೂ ಈ ಎರಡು ಕುಟುಂಬಗಳ ನಡುವೆ ಜಗಳವಾಗಿತ್ತು. ಆಗ ಸ್ಥಳೀಯರೇ ಬಗೆಹರಿಸಿದ್ದರು.
ನಿನ್ನೆ ಮತ್ತೆ ಆಟೋ ನಿಲ್ಲಿಸುವ ಸಂಬಂಧವಾಗಿ ಆರಂಭಗೊಂಡ ಜಗಳ, ಬೇರೆಯದೇ ಸ್ವರೂಪ ಪಡೆದಿದ್ದು, 9 ಜನರನ್ನ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೊರೋನಾ ಪಾಸಿಟಿವ್ ಆತಂಕ
ತಡರಾತ್ರಿ ನಡೆದ ಮಾರಾಮಾರಿಯಲ್ಲಿ ಬಂಧಿತನಾಗಿರುವ ಓರ್ವನಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ಹೇಳಲಾಗುತ್ತಿದ್ದು, ಉಪನಗರ ಠಾಣೆ ಪೊಲೀಸರಿಗೆ ಮತ್ತೆ ಕೊರೋನಾ ಪಾಸಿಟಿವ್ ಕಾಡತೊಡಗಿದೆ. ಈ ಹಿಂದೆ ಕಳ್ಳನನ್ನ ಹಿಡಿದು ಪಾಸಿಟಿವ್ ಗೆ ಕೆಲವು ಸಿಬ್ಬಂದಿಗಳು ಗುರಿಯಾಗಿದ್ದರು.
ಈಗ ಈ ಪ್ರಕರಣ ಮತ್ತೆ ಪೊಲೀಸರಿಗೆ ಕೊರೋನಾ ಬರುತ್ತಾ ಎಂಬ ಆತಂಕವನ್ನ ಸೃಷ್ಟಿ ಮಾಡಿದ್ದು, ಈಗಾಗಲೇ ಪೊಲೀಸರು ಜಾಗೃತರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರಂತೆ.