ಧಾರವಾಡದಲ್ಲಿದ್ದ ಸ್ನೇಹಲ್-ಭೀಮಾಶಂಕರ ಗುಳೇದ ಸೇರಿದಂತೆ-2ಐಎಎಸ್, 3ಐಪಿಎಸ್ ವರ್ಗಾವಣೆ

ಬೆಂಗಳೂರು: ಧಾರವಾಡದಲ್ಲಿ ಸಿಇಓ ಆಗಿದ್ದ ಆರ್.ಸ್ನೇಹಿಲ್ ಅವರು ಮೆಸ್ಕಾಂದ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದವರು, ಅವರಿನ್ನೀಗ ಪಿಯು ಬೋರ್ಡಿನ ನಿರ್ದೇಶಕ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಸರಕಾರ ಇಂದು ಇಬ್ಬರು ಐಎಎಸ್ ಮತ್ತು ಮೂವರು ಐಪಿಎಸ್ ಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಯಾವುದೇ ಪೋಸ್ಟಿಂಗ್ ಇಲ್ಲದೇ ಇದ್ದಿದ್ದ ಐಎಎಸ್ ಅಧಿಕಾರಿ ಪ್ರಶಾಂತಕುಮಾರ ಮಿಶ್ರಾ ಅವರನ್ನ ಸ್ನೇಹಿಲ್ ಅವರ ಜಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಇನ್ನುಳಿದಂತೆ ಡಿಸಿಪಿಯಾಗಿದ್ದ ಭೀಮಾಶಂಕರ ಗುಳೇದರನ್ನ ಸಿಐಡಿ ಎಸ್ಪಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಭೀಮಾಶಂಕರ ಗುಳೇದರ ವರ್ಗಾವಣೆಯಿಂದ ತೆರುವಾದ ಜಾಗಕ್ಕೆ ಸಿ.ಕೆ.ಬಾಬಾ ಅವರನ್ನ ವರ್ಗಾವಣೆ ಮಾಡಲಾಗಿದೆ. ಕೆಎಸ್ ಆರ್ ಪಿ 9 ಬಟಾಲಿಯನ್ ಕಮಾಂಡೆಂಟ್ ಆಗಿದ್ದ ಎಸ್.ಗಿರೀಶರನ್ನ ರಾಮನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಡಾ.ಅನೂಪ ಶೆಟ್ಟಿ ಅವರನ್ನ ಎಸ್.ಗಿರೀಶರ ಜಾಗಕ್ಕೆ ವರ್ಗಾವಣೆ ಮಾಡಲಾಗಿದೆ.