ಬಸ್ ನಿಲ್ದಾಣ ಅಧಿಕಾರಿ ‘ಅದರಗುಂಚಿ’ ಪ್ರಾಮಾಣಿಕತೆ; ಬೆಲೆ ಬಾಳುವ ಮೊಬೈಲ್ ವಾಪಾಸ್
ಧಾರವಾಡ: ನಗರದ ಹೊಸ ಬಸ್ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ನಿಲ್ದಾಣಾಧಿಕಾರಿ ಅದರಗುಂಚಿ ಅವರಿಗೆ ಸಿಕ್ಕ ಬೆಲೆಬಾಳುವ ಮೊಬೈಲ್ ಸೆಟ್‍ನ್ನು ಸುರಕ್ಷಿತವಾಗಿ ಅದರ ವಾರಸುದಾರರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಇಂದು ಬೆಳಿಗ್ಗೆ ರಾಹುಲ್ ಎಂ. ಬಸಟ್ಟಿ ಎಂಬುವರ ಮೊಬೈಲ್ ಕಳೆದಿತ್ತು. ಈ ಕುರಿತು ಅವರ ತಂದೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮಾಹಿತಿ ನೀಡಿದರು. ನಿಲ್ದಾಣಾಧಿಕಾರಿ ಅದರಗುಂಚಿಯವರು ತಮಗೆ ಸಿಕ್ಕ ಮೊಬೈಲ್‍ನ್ನು ಸಂಬಂಧಿಸಿದ ವ್ಯಕ್ತಿಗೆ ಹಿಂದಿರುಗಿಸಿದರು. ಈ ಸಂದರ್ಭದಲ್ಲಿ ವಿಭಾಗದ ಉಪಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಶಶಿಧರ ಕುಂಬಾರ ಉಪಸ್ಥಿತರಿದ್ದರು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಬಸಲಿಂಗಪ್ಪ ಬೀಡಿ ತಿಳಿಸಿದ್ದಾರೆ.