ಬೆಳಗಾದರೇ ಯಾವ್ಯಾವ ಜಿಲ್ಲೆಯಲ್ಲಿ ಮಳೆ ಬರತ್ತೇ ಗೊತ್ತಾ: ಇಲ್ಲಿದೆ ನೋಡಿ ಮಾಹಿತಿ..

ಧಾರವಾಡ: ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ನಾಳೆ ಭಾರೀ ಮಳೆ ಸಾಧ್ಯತೆಯಿದೆ ಎಂದು ಉತ್ತರ ಕರ್ನಾಟಕ ಹವಾಮಾನ ಮುನ್ಸೂಚನಾ ಕೇಂದ್ರ ತಿಳಿಸಿದೆ.
ಧಾರವಾಡದ ಕೃಷಿ ವಿವಿಯಲ್ಲಿರುವ ಕೇಂದ್ರದಿಂದ ಬ್ಯುಲೆಟಿನ್ ಬಿಡುಗಡೆ ಮಾಡಲಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಳೆ ಎಲ್ಲಕ್ಕಿಂತ ಅತೀ ಹೆಚ್ಚು ಮಳೆಯಾಗಲಿದೆ ಎಂದು ಮಾಹಿತಿಯನ್ನ ನೀಡಿದೆ. ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಬೀದರ, ಕೊಪ್ಪಳ ಜಿಲ್ಲೆಗಳಲ್ಲಿಯೂ ಹೆಚ್ಚಿನ ಮಳೆಯಾಗುವ ಲಕ್ಷಣಗಳಿವೆ ಎಂಬುದನ್ನ ತಿಳಿಸಿದೆ.
ಈಗಾಗಲೇ ಉತ್ತರ ಕರ್ನಾಟಕ ಭಾಗದಲ್ಲಿ ನಿರಂತರ ಮಳೆಯಿಂದ ಜನರು ಕಂಗಾಲಾಗಿ, ಬೆಳೆಗಳು ಸಾಕಷ್ಟು ಹಾಳಾಗಿವೆ. ಕೆಲವು ಬೆಳೆಗಳನ್ನ ಈಗಷ್ಟೇ ತೆಗೆಯಲಾಗುತ್ತಿದ್ದು, ಅದಕ್ಕೂ ತೊಂದರೆಯಾಗುವ ಲಕ್ಷಣಗಳು ಕಾಣತೊಡಗಿವೆ.
ಇಂದಿನ ಬುಲೆಟಿನ್ ಹೊರಬಂದ ನಂತರ ರೈತರು ಮತ್ತಷ್ಟು ಜಾಗೃತೆಯಿಂದ ಇರಬೇಕು. ಸೂಚನೆಯನ್ನ ಧಿಕ್ಕರಿಸಿ ಹೊಲ-ಗದ್ದೆಗಳಿಗೆ ತೆರಳಬೇಡಿ. ಹೊರಗಡೆ ಹೋದಾಗ ಅತಿಯಾದ ಮಳೆಗೆ ಸಿಕ್ಕು ಸಂಕಷ್ಟು ಅನುಭವಿಸುವುದು ಬೇಡ.