ಇಂಥ ಸರಕಾರಿ ಶಾಲೆಯನ್ನ ನೀವೆಂದೂ ನೋಡಿರಲಿಕ್ಕೂ ಸಾಧ್ಯವಿಲ್ಲ: ಸ್ವಂತ ಖರ್ಚಿನಲ್ಲಿ ಆ ಟೀಚರ್ ಮಾಡಿದ್ದೇನು ಗೊತ್ತಾ..?

ಸರಕಾರಿ ಶಾಲೆಗೆ ಸಹಾಯ ಮಾಡುವ ಮತ್ತೂ ಇಂಥಹ ಶಿಕ್ಷಕಿಯರಿಗೆ ಅಭಿನಂದನೆ ತಿಳಿಸುವುದಿದ್ದರೇ 9901302555 ಕಾಲ್ ಮಾಡಿ.. (ದಯವಿಟ್ಟು ನಾವು ನಂಬರ ಕೊಟ್ವಿ ಅಂತಾ ಹೇಳಬೇಡಿ)
ಹುಬ್ಬಳ್ಳಿ: ನಿಮಗೊಂದು ಅಪರೂಪದ ಮಾಹಿತಿಯನ್ನ ಕೊಡುತ್ತಿದ್ದೇವೆ ನೋಡಿಲ್ಲಿ. ಇಲ್ಲಿ ತಾವು ಸೇವೆ ಸಲ್ಲಿಸುವ ಸರಕಾರಿ ಶಾಲೆಗೆ ಏನಾದರೂ ಮಾಡಬೇಕೆಂದುಕೊಂಡ ಶಿಕ್ಷಕಿಯೋರ್ವರ ಸಾಹಸಗಾಥೆಯಿದು. ಅದೇ ಕಾರಣಕ್ಕೆ ಇಡೀ ಊರಿಗೆ ಊರೇ ಈ ಶಿಕ್ಷಕಿಯ ಗುಣಗಾನ ಮಾಡುತ್ತಿದೆ. ಅದೇನು ಅಂತೀರಾ.. ಪೂರ್ತಿಯಾಗಿ ಇದನ್ನ ನೋಡಿ..
ಈ ಮಾಹಿತಿಯಲ್ಲಿನ ಭಾವಚಿತ್ರಗಳನ್ನ ನೋಡಿದ್ರೇ ನಿಮಗೊಂದು ಹೊಸ ಲೋಕ ಕಾಣಿಸದೇ ಇರದು. ಇದು ಸರಕಾರಿ ಶಾಲೆ ಎಂದರೇ ನೀವೂ ನಂಬುತ್ತೀರಾ..! ನೀವೂ ನಂಬಲೇಬೇಕು. ಯಾಕಂದ್ರೇ, ಇಲ್ಲಿರುವ ಎಲ್ಲವೂ ಸತ್ಯ. ಇದಕ್ಕೆ ಕಾರಣವಾಗಿದ್ದು, ಇದೇ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿರುವ ಆಶಾಬೇಗಂ ಮುನವಳ್ಳಿ..
ಹೌದು.. ಇಷ್ಟೇಲ್ಲ ಚೆಂದ ಕಾಣುತ್ತಿರುವ ಹುಬ್ಬಳ್ಳಿ ತಾಲೂಕಿನ ಸುತಗಟ್ಟಿ ಗ್ರಾಮದ ಸರಕಾರಿ ಶಾಲೆ ಎಲ್ಲರಿಗೂ ಮಾದರಿಯಾಗುವ ರೀತಿಯಲ್ಲಿ ಮಕ್ಕಳನ್ನ ಕೈ ಮಾಡಿ ಕರೆಯುತ್ತಿದೆ. ಅಸಲಿಗೆ ಸರಕಾರಿ ಶಾಲೆಗಳಿಗೆ ಮಕ್ಕಳ ಅವಶ್ಯಕತೆಯೂ ಇದೆ.
ಸುತಗಟ್ಟಿ ಗ್ರಾಮದ ಈ ಶಾಲೆಯ ಬಣ್ಣವನ್ನ ಕೊರೋನಾ ಸಮಯದಲ್ಲೇ ಮಾಡಿ ಮುಗಿಸಿದ್ದು ಈ ಶಿಕ್ಷಕಿಯ ಜಾಣಾಕ್ಷ ನಡೆ. ಯಾವುದೇ ಕೆಲಸವನ್ನ ಹೇಳದೇ, ಪ್ರಚಾರ ಪಡೆಯದೇ ಮುಗಿಸಿಬಿಡುವ ಪ್ರಯತ್ನ ಅವರದ್ದು ಅನಿಸತ್ತೆ. ಹಾಗಾಗಿಯೇ ಆ ಶಾಲೆಯನ್ನ ನೋಡುವ ದೃಷ್ಟಿಯನ್ನ ಬದಲಾವಣೆ ಮಾಡಿದ್ದಾರೆ, ಈ ಶಿಕ್ಷಕಿ.
ಶಾಲೆಯ ಪ್ರತಿಯೊಂದು ಭಾಗದಲ್ಲಿ ಕೆಎಸ್ಸಾರ್ಟಿಸಿ ಬಸ್, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್, ಎರಡು ವಿಧದ ರೈಲು ಹೀಗೆ ಸಾಗುತ್ತದೆ ಚಿತ್ತಾರದ ಮೋಡಿ. ಇನ್ನೂ ನಡೆಯುತ್ತಿದೆ ಬಣ್ಣದ ಕೆಲಸ.
ಟೀಚರ್ ಏನಂತಾರೆ..
ನಾನು ಇದನ್ನೇಲ್ಲ ಪ್ರೀತಿಯಿಂದ ನಮ್ಮ ಶಾಲೆಗೆ ಮಾಡಿಕೊಂಡಿರುವುದು. ಇದಕ್ಕೆ ದಯವಿಟ್ಟು ಪ್ರಚಾರ ಮಾಡುವುದು ಬೇಡ. ನಮ್ಮ ಶಾಲೆಗೆ ಮಕ್ಕಳು ಹೆಚ್ಚು ಬಂದರೇ ಸಾಕು. ನನ್ನ ಕನಸು ನನಸಾದಂತೆ. ಪ್ಲೀಸ್.. ಪ್ರಚಾರ ಮಾಡಬೇಡಿ.
ಇಲಾಖೆ ಗುರುತಿಸಿಬೇಕು
ಹೀಗೆ ಎಲೆಮರೆಕಾಯಿಯಂತೆ ಕಾರ್ಯನಿರ್ವಹಿಸುವ ಶಿಕ್ಷಕರನ್ನ ಇಲಾಖೆ ಗುರುತಿಸಬೇಕಿದೆ. ಗ್ರಾಮೀಣ ಭಾಗದಲ್ಲಿ ಯಾರಿಗೂ ಗೊತ್ತಾಗದ ಹಾಗೇ ನಡೆದುಕೊಳ್ಳುತ್ತಿರುವ ಶಿಕ್ಷಕರಿಗೆ ಪ್ರೋತ್ಸಾಹ ನೀಡಿದರೇ ಇನ್ನಷ್ಟು ಶಿಕ್ಷಕರೂ ಮನಸ್ಸು ಮಾಡಬಹುದಲ್ವೇ.. ಇಲಾಖೆ ಚಿಂತಿಸಬೇಕಿದೆ.