ರಿಮೋಟ್ ಶೆಲ್ ನುಂಗಿ ಮಗು ಸಾವು- ಪಾಲಕರೇ ಹುಷಾರ್..!
ಮೈಸೂರು: ಟವಿ ನೋಡಿ ಎಲ್ಲೇಂದರಲ್ಲಿ ರಿಮೋಟ್ ಗಳನ್ನಿಟ್ಟು ಅದು ಮಕ್ಕಳ ಕೈಗೆ ಸಿಕ್ಕರೇ ಎಂತಹ ಪ್ರಮಾದ ನಡೆಯತ್ತೆ ಎಂಬುದಕ್ಕೆ ಸಾಕ್ಷಿಯಂಬಂತೆ ಘಟನೆಯೊಂದು ಮೈಸೂರಿನ ಇಟ್ಟಿಗೆಗೂಡಿನ ಮಾನಸ ರಸ್ತೆಯ ಮನೆಯೊಂದರಲ್ಲಿ ನಡೆದಿದ್ದು, ಮಗುವೊಂದು ರಿಮೋಟ್ ಶೆಲ್ ನುಂಗಿ ಸಾವನ್ನಪ್ಪಿದೆ.
ಒಂದೂವರೆ ವರ್ಷದ ಮಗು ಕಳೆದ ಎರಡು ದಿನದ ಹಿಂದೆ ರಿಮೋಟ್ ಶೆಲ್ ನ್ನ ನುಂಗಿತ್ತು. ತಂದೆ ಶೆಲ್ವರಾಜ್ ಮಗುವನ್ನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಿದ್ದರು. ಇದಾದ ನಂತರ ಶೆಲ್ ನ್ನ ಶಸ್ತ್ರ ಚಿಕಿತ್ಸೆ ಮಾಡಿ ಹೊರಗೆ ತೆಗೆಯಲಾಗಿತ್ತು.
ಚಿಕಿತ್ಸೆಯ ನಂತರ ಮಗು ಚೇತರಿಸಿಕೊಳ್ಳದೇ ಸಾವಿಗೀಡಾಗಿದೆ. ಈ ಬಗ್ಗೆ ನಜರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಿವಿ ನೋಡಿದ ನಂತರ ಮಕ್ಕಳ ಕೈಗೆ ಸಿಗದ ಹಾಗೇ ರಿಮೋಟ್ ನ್ನ ಇಡಬೇಕೆಂಬ ಸಾಮಾನ್ಯ ಜ್ಞಾನವನ್ನೂ ಪಾಲಕರು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿಯೇ ಇಂತಹ ಅವಘಡಗಳು ಸಂಭವಿಸುತ್ತಲೇ ಇವೆ. ಜನರು ಈ ಥರದ ಪ್ರಕರಣವನ್ನ ನೆನಪಲ್ಲಿಟ್ಟುಕೊಂಡಾದರೂ ಜಾಗೃತೆ ವಹಿಸುವುದು ಒಳಿತು.