ಧಾರವಾಡ: ಪಾಸಿಟಿವ್ ಬಂದಿದೆಯಂದು ವ್ಯಕ್ತಿ ಆತ್ಮಹತ್ಯೆ: ಗ್ರಾಮದಲ್ಲಿ ಆತಂಕ

ಧಾರವಾಡ: ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ದುಂದೂರ ಗ್ರಾಮದಲ್ಲಿ ವ್ಯಕ್ತಿಯೋರ್ವ ತನಗೆ ಪಾಸಿಟಿವ್ ಬಂದಿದೆಯಂದುಕೊಂಡು ತನ್ನ ಹೊಲಕ್ಕೋಗಿ ಆತ್ಮಹತ್ಯೆ ಮಾಡಿಕೊಂಡು ಘಟನೆ ಇಂದು ಬೆಳಗಿನ ಜಾವ ಸಂಭವಿಸಿದೆ.
ಸುಮಾರು 68 ವರ್ಷದ ವ್ಯಕ್ತಿಯೇ ಹೊಲದಲ್ಲಿ ನೇಣಿಗೆ ಶರಣಾಗಿದ್ದು, ಕಳೆದ 29 ರಂದು ವೈಧ್ಯರಿಂದ ತಪಾಸಣೆ ಮಾಡಿಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ತನಗೆ ಕೊರೋನಾ ಬಂದಿದೆಯಂದುಕೊಂಡಿದ್ದಾನೆ.
ರಾತ್ರಿಯಲ್ಲಾ ಇದೇ ವಿಷಯದಲ್ಲಿ ಎಲ್ಲರೊಂದಿಗೆ ಹೇಳಿಕೊಳ್ಳುತ್ತ ಕೂತಿದ್ದ ವ್ಯಕ್ತಿ, ಬೆಳಗಿನ 5ಗಂಟೆ ಸುಮಾರಿಗೆ ಹೊಲಕ್ಕೆ ಹೋಗಿ ನೇಣಿಗೆ ಶರಣಾಗಿದ್ದಾನೆ. ಯಾವುದೇ ರೀತಿಯ ಗುಣಲಕ್ಷಣಗಳು ಇಲ್ಲದೇ ಇದ್ರೂ ಕೂಡಾ, ತಮಗೆ ತಾವೇ ಹಾಗಂದುಕೊಂಡಿದ್ದರೆನ್ನಲಾಗಿದೆ.
ಕೊರೋನಾ ಪಾಸಿಟಿವ್ ಎಂದುಕೊಂಡಿದ್ದರಿಂದ ಗ್ರಾಮದಲ್ಲಿಯೂ ಕೂಡಾ ಆತಂಕ ಮನೆ ಮಾಡಿದ್ದು, ಮರಣೋತ್ತರ ಪರೀಕ್ಷೆಯನ್ನ ಗ್ರಾಮದಲ್ಲಿಯೇ ಮಾಡಲು ನಿರ್ಧರಿಸಲಾಗಿದೆ.
ಅಣ್ಣಿಗೇರಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಗ್ರಾಮಕ್ಕೆ ಪೊಲೀಸರು ತೆರಳಿದ್ದು ಯಾವುದೇ ಆತಂಕವನ್ನ ಪಡಬೇಡಿ ಎಂದು ಜನರಿಗೆ ಮನವಿ ಮಾಡಿಕೊಂಡಿದ್ದಾರೆ.
ಕೊರೋನಾ ಭಯದಿಂದ ತೀರಿಕೊಂಡ ವ್ಯಕ್ತಿಗೆ ನಿಜವಾಗಿಯೂ ಪಾಸಿಟಿವ್ ಇತ್ತಾ ಅಥವಾ ಇಲ್ವಾ ಎಂಬುದು ಮರಣೋತ್ತರ ಪರೀಕ್ಷೆಯ ನಂತರ ಗೊತ್ತಾಗಲಿದೆ.