ರಾಗಿಣಿಯನ್ನ ಚಿತ್ರರಂಗಕ್ಕೆ ತಂದಿದ್ದೇ ಉತ್ತರ ಕರ್ನಾಟಕದವರು..! ಯಾರಿಗೂ ಗೊತ್ತಿಲ್ಲದ ಸ್ಟೋರಿ ಇಲ್ಲಿದೆ ನೋಡಿ..

ಹುಬ್ಬಳ್ಳಿ: ಕನ್ನಡ ಚಿತ್ರರಂಗದಲ್ಲಿನ ಈಗೀನ ಹಾಟ್ ಪ್ರಕರಣದ ಹಾಟ್ ಬೆಡಗಿಯನ್ನ ಚೆಂದನವನ ಯಾನೆ ಕನ್ನಡ ಚಿತ್ರರಂಗಕ್ಕೆ ಕರೆದುಕೊಂಡು ಬಂದಿದ್ದು, ಉತ್ತರ ಕರ್ನಾಟಕದ ಸಜ್ಜನ ನಿರ್ಮಾಪಕ ಎಂಬುದು ನಿಮಗೆ ಗೊತ್ತಾ. ಈಕೆಯನ್ನ ಚಿತ್ರರಂಗಕ್ಕೆ ಕರೆದುಕೊಂಡು ಬಂದಾಗ ಆಕೆ ಹೇಗಿದ್ದಳು ಗೊತ್ತಾ.. ಇಲ್ಲಿದೆ ನೋಡಿ ಇಂಟರಸ್ಟಿಂಗ್ ಮಾಹಿತಿ..
ರಾಗಿಣಿ ದ್ವಿವೇದಿ.. ಸಧ್ಯ ಕ್ರೈಂನಲ್ಲೂ ಕನ್ನಡ ಚಿತ್ರರಂಗದಲ್ಲೂ ತುಪ್ಪ ಸುರಿಸುತ್ತಿರುವ ಬೆಡಗಿ. ಚೂರು ಸಿನೇಮಾದ ಗೀಳಿಲ್ಲದ ಈಕೆಯನ್ನ ಕನ್ನಡ ಚಿತ್ರರಂಗದ ಮೂಲಕ ಬೆಳ್ಳಿತೆರೆಯಲ್ಲಿ ತೋರಿಸಿದ್ದು, ಗದಗ ಜಿಲ್ಲೆಯ ನಿರ್ಮಾಪಕ ಕಂ ನಿರ್ದೇಶಕ.
ನಿಮಗೆ ಕಡ್ಲಿಮಟ್ಟಿ ಸ್ಟೇಷನ್ ಮಾಸ್ತರ್ ಸಿನೇಮಾದ ನೆನಪಿದ್ದರೇ ಇವರು ಯಾರೂ ಎನ್ನುವುದು ಗೊತ್ತಾಗತ್ತೆ. ಯಾವತ್ತೂ ಕನ್ನಡವನ್ನ ಮತ್ತೂ ಕನ್ನಡತನವನ್ನ ಬಿಟ್ಟು ಹೋಗದ ನಿರ್ಮಾಪಕ, ನಿರ್ದಶಕರಿವರು. ತಮ್ಮ ಸಾವಿನ ಹತ್ತಿರವಿದ್ದಾಗಳೂ ಇವರ ಬಳಿ ಯಾರು ಸುಳಿಯಲಿಲ್ಲ ಬಿಡಿ.
ಆದರೆ. ಇದೀಗ ಡ್ರಗ್ ಹೆಸರಿನಲ್ಲಿ ಕೇಳಿ ಬಂದಿರುವ ರಾಗಿಣಿಯನ್ನ ಇವರೇ ಕರೆ ತಂದಿದ್ದು, ಅದು ತಮ್ಮ ಸ್ವಂತ ನಿರ್ಮಾಣದ ಉತ್ತರ ಕರ್ನಾಟಕದ ಸೊಗಡಿನ “ಹೋಳಿ” ಸಿನೇಮಾದ ಮೂಲಕ.
ತಾನೂ ಸಿನೇಮಾದಲ್ಲಿ ಮಾಡಬಹುದೆಂಬ ಕಲ್ಪನೆಯೂ ಇಲ್ಲದ ಈಕೆಯನ್ನ ಕರೆತಂದಿದ್ದು ಶಂಕರಲಿಂಗ ಸುಗ್ನಳ್ಳಿ ಎಂಬುವವರು. ಗದಗ ಜಿಲ್ಲೆಯ ಶಿರಹಟ್ಟಿ ಸಮೀಫದ ಸುಗ್ನಳ್ಳಿಯವರು. ಆ ಸಿನೇಮಾದಲ್ಲಿ ಆಕೆ ಪಾತ್ರ ಮಾಡುವಾಗ ಎಲ್ಲೂ ಬೇರೆ ಥರದಲ್ಲಿ ನಡೆದುಕೊಂಡಿದಿಲ್ಲ.
ಆದರೆ, ರಾಗಿಣಿ ತನ್ನ ಮೊದಲ ಸಿನೇಮಾವನ್ನ ಮದಕರಿ ಎಂದೇ ಹೇಳುತ್ತಿದ್ದಳು. ಅಷ್ಟು ಚಾಲಾಕಿ ಎನ್ನುವುದು ಹಲವರ ಅಭಿಪ್ರಾಯ. ಸತ್ಯವೆಂದರೇ, ಆಕೆಯನ್ನ ಜನರ ಮುಖಗಳಿಗೆ ತೋರಿಸಿದ್ದು ಉತ್ತಮ ನಡೆಯ ಶಂಕರಲಿಂಗ್ ಸುಗ್ನಳ್ಳಿ. ಇವತ್ತೂ ಅವರಿಲ್ಲ, ಅವರಿದ್ದಿದ್ದರೇ, ಸಾಕಷ್ಟು ನೊಂದುಕೊಳ್ಳುತ್ತಿದ್ದರು..