ದೇವದುರ್ಗದ ಬಳಿ ಭೀಕರ ಅಪಘಾತ ನಾಲ್ವರ ದುರ್ಮರಣ

ರಾಯಚೂರು: ಕಾರ್ ಮತ್ತು ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವಿಗೀಡಾದ ಘಟನೆ ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಮದ ಬಳಿ ಸಂಭವಿಸಿದೆ.
ಜಾಲಹಳ್ಳಿ ಸಮೀಪದ ಚಿಂಚೋಡಿ ಗ್ರಾಮದ ಹತ್ತಿರ ಶುಕ್ರವಾರ ಸಂಜೆ 5.20 ಕ್ಕೆ ಲಾರಿ, ಮಾರುತಿ ಕಾರ್ ಮಧ್ಯೆ ಭೀಕರ ಅಪಾಘಾತ ಉಂಟಾಗಿ ಕಾರ್ ನಲ್ಲಿ ಇರುವು ಮೂರು ಜನ ಸ್ಥಳದಲ್ಲಿ ಸಾವುನ್ನಪ್ಪಿದ್ದಾರೆ. ಉಳಿದ ಇಬ್ಬರನ್ನು ಜಾಲಹಳ್ಳಿ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆಸ್ಪತ್ರೆಗೆ ದಾಖಲಾದ ಇನ್ನೋರ್ವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದು, ಮೃತಪಟ್ಟವರ ಸಂಖ್ಯೆ ನಾಲ್ಕಾಗಿದೆ. ಮೃತರೆಲ್ಲರೂ ಲಿಂಗಸೂಗೂರು ತಾಲ್ಲೂಕಿನ ದೇವರಭೂಪುರ ಗ್ರಾಮದವರಾಗಿದ್ದಾರೆ.
ಕಾರಿನಲ್ಲಿ ಬಂದವರು ಅಂತ್ಯಸಂಸ್ಕಾರ ಕ್ಕೆ ಹೊಸೂರು ಸಿದ್ದಾಪುರ ಗ್ರಾಮಕ್ಕೆ ಬಂದು ಮುಗಿಸಿಕೊಂಡು ಮರಳಿ ತಮ್ಮೂರಿಗೆ ಹೋಗುವ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.