ಅಥಣಿ ಬಳಿಯೂ ಗಾಂಜಾ ವಶ: ಡಿಸಿಆರ್ ಬಿ ಪೊಲೀಸರ ಕಾರ್ಯಾಚರಣೆ
ಚಿಕ್ಕೋಡಿ: ರಾಜ್ಯದಲ್ಲಿ ಡ್ರಗ್ಸ್ ದಂಧೆಯ ಕರಾಳ ಮುಖ ಬಯಲಾಗುತ್ತಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಗಾಂಜಾ ಮಾರಾಟ ಪ್ರಕರಣಗಳು ಪತ್ತೆಯಾಗುತ್ತಿರುವುದು ಹೆಚ್ಚಾಗಿದ್ದು, ಅಥಣಿ ಬಳಿಯೂ ಡಿಸಿಆರ್ ಬಿ ಪೊಲೀಸರ ಕಾರ್ಯಾಚರಣೆಯಲ್ಲಿ ಗಾಂಜಾದ ಜೊತೆಗೆ ಇಬ್ಬರು ಸಿಕ್ಕುಬಿದ್ದಿದ್ದಾರೆ.
ಬೆಳಗಾವಿಯ ಡಿ ಸಿ ಆರ್ ಬಿ ಪೋಲಿಸರು ಮತ್ತು ಅಥಣಿ ಪೋಲಿಸರ ಜಂಟಿಯಾಗಿ ಅಥಣಿ ತಾಲೂಕಿನ ಹಣಮಾಪುರ ಕ್ರಾಸ್ ಬಳಿ ದಾಳಿ ನಡೆಸಿ ಇಬ್ಬರನ್ನ ಬಂಧನ ಮಾಡಿದ್ದಾರೆ.
ಬಂಧಿತರಿಂದ 39.920 ಮೌಲ್ಯದ 2 ಕೆಜಿ ಗಾಂಜಾವನ್ನ ವಶಕ್ಕೆ ಪಡೆಯಲಾಗಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಜೇರಗಿಹಾಳ ಗ್ರಾಮದ ಸಾಗರ ಕಟ್ಟಿಕರ್ ಮತ್ತು ಗುರುಲಿಂಗ ಡೋಲೆ ಬಂಧಿತ ಆರೋಪಿಗಳಾಗಿದ್ದು, ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.