“ಚ್ಚಾದ್ದರ್” ಹಾಕಿ ದರೋಡೆ: ಧಾರವಾಡದಲ್ಲಿಬ್ಬರ ಬಂಧನ- ಆತಂಕ ಮೂಡಿಸಿದ್ದ ಪ್ರಕರಣ ಪತ್ತೆ

ಧಾರವಾಡ: ತಗಡಿನ ಶೆಡ್ ನಲ್ಲಿ ಮಲಗಿದ್ದ ವೃದ್ಧನೋರ್ವನಿಗೆ ಚ್ಚಾದ್ದರ್ ಹೊಚ್ಚಿ ಹೊಡೆದು ಬಂಗಾರ ಮತ್ತು ಹಣವನ್ನ ಲೂಟಿ ಮಾಡಿದ್ದ ಇಬ್ಬರನ್ನ ಬಂಧಿಸುವಲ್ಲಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಧಾರವಾಡ ತಾಲೂಕಿನ ವರವಿನಾಗಲಾವಿ ಗ್ರಾಮದ ಈಶ್ವರ ಕಲಭಾವಿ ಎಂಬ ವೃದ್ಧನನ್ನ ಹೊಲದ ಶೆಡ್ಡಿನಲ್ಲಿ ಮಲಗಿದ್ದಾಗ ಅದೇ ಗ್ರಾಮದ ನಿಂಗಪ್ಪ ತಡಕೋಡ ಮತ್ತು ಮಂಜುನಾಥ ನೀರಲಕಟ್ಟಿ ಎಂಬ ಆರೋಪಿಗಳು ವೃದ್ಧನಿಗೆ ಥಳಿಸಿ ಅರ್ಧ ತೊಲೆ ಬಂಗಾರ ಮತ್ತು 2ಸಾವಿರ ರೂಪಾಯಿ ದೋಚಿಕೊಂಡು ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಗ್ರಾಮೀಣ ಠಾಣೆ ಪಿಸೈ ಮಹೇಂದ್ರಕುಮಾರ ಆರೋಪಿಗಳನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣ ಗ್ರಾಮದಲ್ಲಿ ಆತಂಕದ ಛಾಯೆಯನ್ನ ಮೂಡಿಸಿತ್ತು.