ದ್ವಿಚಕ್ರವಾಹನದಲ್ಲಿ ಮರಿ ನಾಗರ: ಸಂಡೇ ಶಾಕ್..!

ಮೈಸೂರು: ಬೆಳಗಾಗಿ ಪ್ರೇಶ್ ತರಕಾರಿ ಸಿಗುತ್ತೆ ಎಂದುಕೊಂಡು ಮಾರುಕಟ್ಟೆಗೆ ಹೋಗಿದ್ದ ವ್ಯಕ್ತಿ, ತರಕಾರಿ ತರಲು ಡಿಕ್ಕಿಯಲ್ಲಿದ್ದ ಬ್ಯಾಗ್ ತೆಗೆಯಲು ಕೈ ಹಾಕಿದ್ದೆ ತಡ, ಬುಸ್ ಎಂದು ಶಬ್ಧ ಮಾಡಿದ್ದು ಮರಿ ನಾಗರ. ಅಯ್ಯೋ.. ಎಂದವರೇ ಡಿಕ್ಕಿ ಮುಚ್ಚಿ ದೂರ ಸರಿದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು ಆ ಮಧ್ಯ ವಯಸ್ಕ.
ಹೌದು.. ಇಂತಹದೊಂದು ಘಟನೆ ಬೆಳ್ಳಂಬೆಳಿಗ್ಗೆ ಮೈಸೂರಿನಲ್ಲಿ ನಡೆದಿದೆ. ತರಕಾರಿ ತರಲು ಬಂದಿದ್ದ ನಾರಾಯಣಪ್ಪ ತಮ್ಮ ದ್ವಿಚಕ್ರವಾಹನದ ಡಿಕ್ಕಿ ತೆಗೆದಾಗ ಮಿಡಿ ನಾಗರ ಇವರನ್ನ ಭಯ ಬೀಳಿಸಿದೆ. ಅಕ್ಕಪಕ್ಕದಲ್ಲಿದ್ದವರು ತಕ್ಷಣ ಸ್ನೇಕ್ ಶ್ಯಾಮ್ ಅವರಿಗೆ ಕಾಲ್ ಮಾಡಿದ್ರು.
ಸ್ನೇಕ್ ಶ್ಯಾಮ್ ಪುತ್ರ ಸೂರ್ಯ ಮೈಸೂರಿನ ದಿವಾನ್ಸ್ ರಸ್ತೆಯಲ್ಲಿದ್ದ ವಾಹನದ ಬಳಿ ಬಂದು ನೋಡಿದಾಗ, ನಾಗರಹಾವು ಅಲ್ಲೇ ಹೊರಳಾಡುತ್ತಿತ್ತು. ತಕ್ಷಣವೇ ಜಾಗೃತೆಯಿಂದ ಮರಿ ನಾಗರವನ್ನ ಹಿಡಿದು ಸುರಕ್ಷಿತ ಜಾಗಕ್ಕೆ ಬಿಟ್ಟು ಬಂದಿದ್ದಾರೆ.
ಸಂಡೇ ಶಾಕ್ ನಿಂದ ಕಂಗಾಲಾಗಿದ್ದ ನಾರಾಯಣಪ್ಪ, ನಂತರವೂ ಭಯದಿಂದಲೇ ದ್ವಿಚಕ್ರವಾಹನವನ್ನ ತೆಗೆದುಕೊಂಡು ಹೋದರು. ಬಹುತೇಕ ತರಕಾರಿ ತೆಗೆದುಕೊಳ್ಳಲಿಲ್ಲ ಅನಿಸತ್ತೆ.