ರಸ್ತೆಯಲ್ಲೇ ತಾಳಿ ಕಟ್ಟಿದ ಪ್ರೇಮಿ: ಊರಿಗೂರೇ ನೆಮ್ಮದಿ ಹಾಳು

ದಾವಣಗೆರೆ: ಕಳೆದ ಮೂರು ವರ್ಷದಿಂದ ಪ್ರೀತಿಯಲ್ಲಿ ಮುಳುಗಿದ್ದ ಜೋಡಿಯೊಂದು ರಸ್ತೆಯಲ್ಲೇ ನಿಂತು ಮದುವೆ ಮಾಡಿಕೊಂಡ ಘಟನೆ ಚನ್ನಗಿರಿ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ನಡೆದಿದ್ದು, ಊರಿನ ನೆಮ್ಮದಿ ಹಾಳಾಗಿದೆಯಂತೆ.
ಹೇಮಂತ ಎಂಬ ಯುವಕನೇ ತನ್ನ ಪ್ರೇಯಸಿಗೆ ನಡು ರಸ್ತೆಯಲ್ಲಿ ತಾಳಿ ಕಟ್ಟಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಸಿದೆ.
ಯುವಕ-ಯುವತಿ ಬೇರೆ ಬೇರೆ ಕೋಮಿನವರಾಗಿದ್ದು, ಗ್ರಾಮದಲ್ಲಿ ಗೊಂದಲ ಉಂಟು ಮಾಡಿದೆ.
ಹೇಮಂತ ಎಂಬ ಯುವಕ ಇತ್ತೀಚೆಗೆ ಸ್ವಜಾತಿಯ ಯುವತಿಯನ್ನ ಮದುವೆಯಾಗಿದ್ದ. ಆದರೆ, ಕಳೆದ ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದ ಯುವತಿಗೆ ಇಂದು ತಾಳಿ ಕಟ್ಟಿದ್ದಾನೆ. ಇಷ್ಟೇಲ್ಲ, ಗೊಂದಲ ಸೃಷ್ಟಿಯಾಗುವುದಕ್ಕೆ ಇದೇ ಘಟನೆ ಕಾರಣವಾಗಿದೆ.
ತನ್ನ ಪ್ರೇಯಸಿಯನ್ನ ಮದುವೆಯಾಗದಂತೆ ತಡೆಯೊಡ್ಡಿದ ಮನೆಯವರನ್ನ ವಿರೋಧಿಸಿಯೇ ಯುವಕ ಇಂತಹ ನಿರ್ಧಾರ ತೆಗೆದುಕೊಂಡಿದ್ದಾನಂತೆ.
ಚನ್ನಗಿರಿ ಪೊಲೀಸ್ ಠಾಣೆ ಸಿಬ್ಬಂದಿಗಳು ಗ್ರಾಮದಲ್ಲಿ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲಾಗುತ್ತಿದೆ.