ಡಾ.ಸರ್ವಪಲ್ಲಿ ರಾಧಾಕೃಷ್ಣನರ ಜನ್ಮದಿನದಂದೇ ಶಿಕ್ಷಕ ನೇಣೀಗೆ ಶರಣು: ಆತಂಕದಲ್ಲಿ ಮನೆಯವರು

ಗದಗ: ಶಿಕ್ಷಣದ ಮೂಲಕವೇ ಬದುಕು ಕಟ್ಟಿಕೊಳ್ಳಬಹುದೆಂದು ಪಾಠ ಮಾಡುವ ಶಿಕ್ಷಕನೇ ಶಿಕ್ಷಕರ ದಿನಾಚರಣೆಯಂದೇ ನೇಣೀಗೆ ಶರಣಾದ ಘಟನೆ ಜಿಲ್ಲೆಯ ರೋಣ ತಾಲೂಕಿನ ನರೇಗಲ್ ಪಟ್ಟಣದಲ್ಲಿ ನಡೆದಿದೆ.
ತಮ್ಮ ಮನೆಯ ತಗಡಿನ ಶೆಡ್ಡಿನಲ್ಲಿರುವ ಆ್ಯಂಗಲರ್ ಪಟ್ಟಿಗೆ ನೇಣು ಹಾಕಿಕೊಂಡು ಶಿಕ್ಷಕ ಬಸವರಾಜ ಶಿವಪ್ಪ ಹೂಗಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಇವರ ಸಾವಿಗೆ ಬೇರೆ ಯಾವುದೇ ರೀತಿಯ ಸಂಶಯವಿರೋದಿಲ್ಲವೆಂದು ಶಿಕ್ಷಕ ಬಸವರಾಜ ತಂದೆ ನರೇಗಲ್ ಠಾಣೆಗೆ ಲಿಖಿತವಾಗಿ ಮಾಹಿತಿ ನೀಡಿದ್ದಾರೆ.
ಶಾಲೆಯಲ್ಲಿ ಎಲ್ಲರೊಂದಿಗೂ ಬೆರೆಯುತ್ತಿದ್ದ ಶಿಕ್ಷಕ ಬಸವರಾಜ, ಲಾಕ್ ಡೌನ್ ಸಮಯದಲ್ಲೂ ವಿದ್ಯಾರ್ಥಿಗಳಿಗೆ ಸೂಕ್ತವಾದ ನಿರ್ದೇಶನಗಳನ್ನ ನೀಡುತ್ತಿದ್ದರೆಂದು ಗೊತ್ತಾಗಿದೆ.