ಹದಗೆಟ್ಟ ರಸ್ತೆ ಸುಧಾರಿಸಿ: ಆಮ್ ಆದ್ಮಿ ಪಾರ್ಟಿ ಒತ್ತಾಯ
        ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿನಗರದ ರಸ್ತೆಗಳ ಪರಿಸ್ಥಿತಿಯನ್ನ ನೀವು ನೋಡಿದ್ದೀರಿ. ಇಲ್ಲಿನ ಜನರ ಪರಿಸ್ಥಿತಿಯನ್ನ ಅರ್ಥ ಮಾಡಿಕೊಂಡು ಮೂಲಭೂತ ಸೌಲಭ್ಯ ಒದಗಿಸಲು ಮುಂದಾಗಿ ಎಂದು ನಗರಾಭಿವೃದ್ಧಿ ಸಚಿವರಿಗೆ ಆಮ್ ಆದ್ಮಿ ಪಾರ್ಟಿ ಇಂದು ಮನವಿ ನೀಡಿತು.
ಹುಬ್ಬಳ್ಳಿಗೆ ಆಗಮಿಸಿದ ಸಚಿವ ಬೈರತಿ ಬಸವರಾಜರಿಗೆ ಮನವಿ ನೀಡಿದ, ವಿಕಾಸ ಸೊಪ್ಪಿನ ಮತ್ತು ಸಂತೋಷ ನರಗುಂದ, ಬೆಂಗಳೂರು ಹೊರತುಪಡಿಸಿದರೇ ದೊಡ್ಡ ನಗರವಿದು. ಇಲ್ಲಿಯೇ ಜನ ಸಂಕಷ್ಟದಲ್ಲಿದ್ದಾರೆ. ನಗರದ ರಸ್ತೆಗಳ ನಿರ್ವಹಣೆ ಮತ್ತು ದುರಸ್ತಿಯ ಕಾರ್ಯವನ್ನ ನಿಭಾಯಿಸುವುದು ಪಾಲಿಕೆಗೆ ಸಮಸ್ಯೆಯಾಗಿದೆ ಎಂದು ವಿವರಿಸಿದ್ದಾರೆ.
ಕೆಲವು ಮಾಹಿತಿಗಳ ಜೊತೆಗೆ ಪೋಟೊ ಕೂಡಾ ನೀಡಿರುವ ಆಮ್ ಆದ್ಮಿ ಪಾರ್ಟಿ, ಸಚಿವರು ಇವುಗಳನ್ನ ನೋಡಿಯಾದರೂ ಕ್ರಮ ಜರುಗಿಸುವಂತೆ ಕೋರಿದ್ದಾರೆ.
                      
                      
                      
                      
                      
                        