ಮಣಿಕಿಲ್ಲಾ ಮನೆಯಲ್ಲಿ ಹರಿಯುತ್ತಿದೆ ರಕ್ತ: ಹೌಹಾರಿದ ಜನತೆ..
ಧಾರವಾಡ: ನಗರದ ಮಣಿಕಲ್ಲಾ ಪ್ರದೇಶದ ಹಲವು ಮನೆಗಳಲ್ಲಿ ನಿರಂತರವಾಗಿ ರಕ್ತ ಹರಿಯುತ್ತಿದೆ. ಪಕ್ಕದಲ್ಲಿಯೇ ಮಾಂಸ ಮಾರಾಟದ ಮಾರುಕಟ್ಟೆ ಇರುವುದರಿಂದ ಅಲ್ಲಿರುವ ಕಲ್ಮಶ ನೀರು ಒಳಗೆ ಬರುತ್ತಿದ್ದು, ಅದನ್ನ ಸರಿಪಡಿಸುವ ಗೋಜಿಗೆ ಯಾರೂ ಹೋಗದ ಪರಿಣಾಮ ಮನೆಯವರು ಸಂಕಷ್ಟ ಅನುಭವಿಸಬೇಕಾಗಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿರುವ ಈ ಘಟನೆ ಜನರಿಗೆ ಅಸಹ್ಯ ಮೂಡಿಸಿದೆ. ಮಾಂಸದ ಮಾರುಕಟ್ಟೆಯ ಒಳಚರಂಡಿ ತುಂಬಿ ಮನೆಗಳಲ್ಲಿ ಹರಿಯುತ್ತಿರುವುದೇ ಇದಕ್ಕೇಲ್ಲ ಕಾರಣ.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ, ಮಾಂಸದ ಮಾರುಕಟ್ಟೆಯ ನೀರು ಹರಿಯುತ್ತಿದ್ದು, ಅದೇ ಮನೆಯಲ್ಲಿ ಆವರಿಸಿದೆ. ಮನೆಯ ಒಳಗಡೆ ಹೋಗಲು ಕೂಡಾ ಆಗುತ್ತಿಲ್ಲ. ಹೀಗಾಗಿ ಪಾಲಿಕೆಗೆ ಜನತೆ ಹಿಡಿಶಾಪ ಹಾಕುತ್ತಿದ್ದಾರೆ.
ಮಹಾನಗರ ಪಾಲಿಕೆ ಈ ವ್ಯವಸ್ಥೆಗೆ ಕಠಿಣ ನಿರ್ಧಾರ ತೆಗೆದುಕೊಳ್ಳದಿದ್ದರೇ, ಜನರ ಅನಾರೋಗ್ಯ ಹೆಚ್ಚಾಗುವುದರಲ್ಲಿ ಯಾವುದೇ ಸಂಶಯವಿಲ್ಲ.