Posts Slider

Karnataka Voice

Latest Kannada News

ಶಾಸಕ ನಿಂಬಣ್ಣನವರ ದೇವಿಕೊಪ್ಪ ಐಬಿಯೂ.. ಸಂತೋಷ ಲಾಡ ಆಗಮನವೂ…!

Spread the love

ಧಾರವಾಡ: ಜಿಲ್ಲೆಯ ಯಾವುದೇ ಕ್ಷೇತ್ರದಲ್ಲಿ ಕೇವಲ ಕೊರೋನಾ ನಡೆಯುತ್ತಿದೆ. ಆದರೆ, ಇದೊಂದು ಕ್ಷೇತ್ರದಲ್ಲಿ ಮಾತ್ರ ರಾಜಕಾರಣ ನಿತ್ಯ ನಿರಂತರ. ಇಲ್ಲಿ ಆಡಳಿತ ನಡೆಸಬೇಕಾದವರದ್ದು ಒಂದು ರೀತಿಯ ರಾಜಕೀಯವಾದ್ರೆ, ವಿರೋಧ ಪಕ್ಷದಲ್ಲಿರೋರದ್ದು ಮತ್ತೊಂದು ರೀತಿಯ ರಾಜಕೀಯ. ಆದರೂ, ಇಂದು ಕಲಘಟಗಿ ಕ್ಷೇತ್ರದಲ್ಲಿ ನಡೆಯುತ್ತಿರೋದು ಸಂತೋಷ ಲಾಡ್ ಆಗಮನದ ಸುದ್ದಿ..

ಹೌದು.. ಮಾಜಿ ಸಚಿವ ಸಂತೋಷ ಲಾಡ ಇಂದು ಅವರದ್ದೇ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಆದರೆ, ಯಾವತ್ತೂ ಇಷ್ಟೊಂದು ಪ್ರಚಾರ ಮಾಡಿರಲಿಲ್ಲ. ಇವತ್ತು ಮಾತ್ರ ಮಾಜಿ ಸಚಿವರ ಆಗಮನಕ್ಕೆ ಜಾತಕಪಕ್ಷಿಗಳಂತೆ ಕ್ಷೇತ್ರದ ಜನತೆ ಕಾಯುತ್ತಿರುವುದು ಸುಳ್ಳಲ್ಲ.

ಹಾಗಾದ್ರೇ, ಇದಕ್ಕೆ ಕಾರಣವಾಗಿದ್ದು ಏನು.. ಮತ್ತೂ ಈಗ ಸಂತೋಷ ಲಾಡ ಬರುತ್ತಿರುವುದು ಏಕೆ.. ಎಂಬುದು ಹಲವರ ಪ್ರಶ್ನೆ. ನಿಜವಾಗಿಯೂ ಹೇಳಬೇಕೆಂದರೇ, ಅವರ ಕ್ಷೇತ್ರಕ್ಕೆ ಲಾಡ ಬರುತ್ತಿದ್ದಾರಷ್ಟೇ. ಅದಕ್ಕೆ ಮತ್ತಷ್ಟು ಮೊಗೆದಷ್ಟು ಕಥೆಗಳನ್ನ ಕಟ್ಟುವುದು ಸೂಕ್ತವಲ್ಲ. ಆದರೆ, ಇದೇ ಸಮಯದಲ್ಲಿ ಹಾಲಿ ಶಾಸಕರು ದೇವಿಕೊಪ್ಪದ ಐಬಿಯಲ್ಲಿ ಠಿಕಾಣಿ ಹೂಡಿರುವುದು ಹಾಲಿ ಆಡಳಿತ ನಡೆಸುವವರಲ್ಲಿ ಆತಂಕ ಮೂಡಿಸಿದೆ.

ಈ ಬಗ್ಗೆ ಸಂತೋಷ ಲಾಡ್ ಆಪ್ತ ಬಳಗದ ಆನಂದ ಕಲಾಲರನ್ನ ಮಾತನಾಡಿಸಿದಾಗ, ಕ್ಷೇತ್ರಕ್ಕೆ ಸಂತೋಷ ಲಾಡ ಬರುತ್ತಿರುವುದು ವಿಶೇಷವೇನಿಲ್ಲ. ಕ್ಷೇತ್ರದ ಜನರ ಬಗ್ಗೆ ಸದಾಕಾಲ ಕಾಳಜಿ ಹೊಂದಿದ್ದಾರೆ. ಕೊರೋನಾ ಸಮಯದಲ್ಲಿ ಏನೇ ತೊಂದರೆಯಾದರೂ, ತಕ್ಷಣವೇ ಮಾತನಾಡುತ್ತಿದ್ದರು. ಜನರ ಜೊತೆ ಸದಾಕಾಲವಿರಲು ಬಯಸುವವರು ಅವರು. ಈಗಲೂ ಅಷ್ಟೇ, ಜನರಿಗೆ ಭೇಟಿಯಾಗಲು ಬರುತ್ತಿದ್ದಾರೆ. ಅವರದ್ದೇ ಕ್ಷೇತ್ರದಲ್ಲಿ ಅವರು ಬರುವುದಕ್ಕೆ ಬಣ್ಣ ಕಟ್ಟುವುದು ಬೇಡ. ರೈತರಿಗಾಗಿ ಸಕ್ಕರೆ ಕಾರ್ಖಾನೆಯ ಜಾಗವನ್ನೂ ವೀಕ್ಷಣೆ ಮಾಡಲಿದ್ದಾರೆಂದು. ಕೊರೋನಾ ಸಮಯದಲ್ಲಿ ಲಾಡರ ಆಪ್ತ ಬಳಗದ ಶ್ರೀಕಾಂತ ಗಾಯಕವಾಡ ಮತ್ತು ಹರೀಶ ಸೇರಿದಂತೆ ನಾವೆಲ್ಲರೂ ಕೊರೋನಾ ಮತ್ತು ಪ್ರವಾಹದ ಸಮಯದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಆದರೆ, ಅದನ್ನ ಯಾವತ್ತೂ ಪ್ರಚಾರಕ್ಕೆ ಬಳಕೆ ಮಾಡಿಕೊಂಡಿಲ್ಲ. ಯಾವ ರೀತಿ ಸಂತೋಷ ಲಾಡ ಪ್ರಚಾರ ಬಯಸುವುದಿಲ್ಲವೋ ಹಾಗೇ ನಮ್ಮ ತಂಡವೂ ಪ್ರಚಾರ ಬಯಸಿಲ್ಲ ಎಂದರು.

ಒಂದೇಡೆ ಸಂತೋಷ ಲಾಡರ ಆಗಮನ ಕ್ಷೇತ್ರದಲ್ಲಿ ಹೊಸ ರೀತಿಯ ಸಂಚಲನ ಮೂಡಿಸಿದೆಯಾದರೂ, ಹಾಲಿ ಶಾಸಕರ ಹೀಗೇಕೆ ಮಾಡುತ್ತಿದ್ದಾರೆಂಬ ಪ್ರಶ್ನೆಗಳು ಮೂಡುತ್ತಿವೆ. ಒಟ್ಟಾರೆ, ಕೊರೋನಾ ಸಮಯದಲ್ಲೂ ಕಲಘಟಗಿ ಕ್ಷೇತ್ರ ಫೂಲ್ ಮಿಚೀಂಗ್ ಆಗಿದೆ.


Spread the love

Leave a Reply

Your email address will not be published. Required fields are marked *