ವಿದ್ಯಾನಗರಿಯಲ್ಲಿ ಗಾಂಜಾ ಘಮಟು: 6 ಜನರ ಬಂಧನ

ಧಾರವಾಡ: ಹುಬ್ಬಳ್ಳಿ-ಧಾರವಾಡದಲ್ಲಿ ಗಾಂಜಾ ಘಮಲು ಅತಿಯಾಗಿತ್ತು ಎಂಬುದಕ್ಕೆ ಸಾಕ್ಷಿಯಾಗಿ ಹಲವು ಪ್ರಕರಣಗಳು ಪತ್ತೆಯಾಗುತ್ತಿದ್ದು, ಧಾರವಾಡ ಶಹರ ಠಾಣೆಯಲ್ಲಿ ಮತ್ತೊಂದು ಪ್ರಕರಣವನ್ನ ಪೊಲೀಸರು ಜಾಲಾಡಿದ್ದು, 6 ಜನರನ್ನ ಬಂಧನ ಮಾಡಲಾಗಿದೆ.
ವಿದ್ಯಾನಗರಿಯ ಆಯಕಟ್ಟಿನ ಜಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ತಂಡವೊಂದನ್ನ ಪತ್ತೆ ಹಚ್ಚುವಲ್ಲಿ ಶಹರ ಠಾಣೆ ಇನ್ಸ್ ಪೆಕ್ಟರ್ ಸತಾರೆ ನೇತೃತ್ವದ ತಂಡ, ಸತ್ಕಾರ, ಪೃಥ್ವಿ ಸೇರಿದಂತೆ ಆರು ಜನರನ್ನ ಬಂಧನ ಮಾಡಿದ್ದಾರೆ.
ಹುಬ್ಬಳ್ಳಿ ಹಾಗೂ ಹುಬ್ಬಳ್ಳಿ ಗ್ರಾಮೀಣ ಠಾಣೆಗಳಲ್ಲಿ ಈಗಾಗಲೇ ಮೂರು ಪ್ರಕರಣಗಳನ್ನ ಪತ್ತೆ ಹಚ್ಚಿರುವ ಪೊಲೀಸರು ಐದು ಜನರನ್ನ ಬಂಧನ ಮಾಡಿದ್ದರು. ಧಾರವಾಡ ಶಹರ ಠಾಣೆ ವ್ಯಾಪ್ತಿಯಲ್ಲಿ ಆರು ಜನರು ಬಂಧಿತರಾಗಿದ್ದು, ಇವರಿಂದ ಮೂರು ಕೆಜಿಗೂ ಹೆಚ್ಚು ಗಾಂಜಾವನ್ನ ವಶಕ್ಕೆ ಪಡೆಯಲಾಗಿದೆ.
ಗಾಂಜಾವನ್ನ ಕಾಲೇಜು ವಿದ್ಯಾರ್ಥಿಗಳಿಗೆ ಸರಬರಾಜು ಮಾಡುತ್ತಿರುವ ಬಗ್ಗೆಯೂ ತನಿಖೆ ನಡೆಯುತ್ತಿದ್ದು, ಆರು ಜನರಿಗೆ ಯಾರೂ ಗಾಂಜಾವನ್ನ ಸಪ್ಲಾಯ್ ಮಾಡುತ್ತಿದ್ದರೆಂಬ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.