ಕುರಿ ಕಾಯುವಾತ- ಐಟಿಐ ವಿದ್ಯಾರ್ಥಿ- ಕ್ಯಾಟರಿಂಗ್ ಮಾಡುವಾತ- ಪೇಂಟರ್: ಹುಬ್ಬಳ್ಳಿಯಲ್ಲಿ ಯಾವ ದಂಧೆ ಮಾಡ್ತಿದ್ರು ಗೊತ್ತಾ- ಡಿಸಿಪಿ ಹೇಳಿದ್ದೇನು

ಹುಬ್ಬಳ್ಳಿ; ಅವಳಿನಗರ ಪೊಲೀಸರು ಗಾಂಜಾ ಘಮಲನ್ನ ಕಡಿಮೆ ಮಾಡಲು ಕಡಿಮೆ ಮಾಡಲು ಪಣತೊಟ್ಟಿದ್ದು, ಕೇಶ್ವಾಪುರ ಠಾಣೆ ಹಾಗೂ ಗೋಕುಲ ಠಾಣೆ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಗಾಂಜಾ ಪ್ರಕರಣಗಳನ್ನ ಪತ್ತೆ ಮಾಡಿದ್ದು, 1436 ಗ್ರಾಂ ಗಾಂಜಾ ಪತ್ತೆ ಹಚ್ಚಿದ್ದು, ನಾಲ್ವರನ್ನ ಬಂಧನ ಮಾಡಲಾಗಿದೆ.
ಗೋಕುಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಾರಿಹಾಳ ಗ್ರಾಮದ ಇಮಾಮಹುಸೇನ ಬಿಜಾಪುರ ಎಂಬ ಆರೋಪಿಯನ್ನ ಬಂಧಿಸಿ, ಆತನಿಂದ 836 ಗ್ರಾಂ ಗಾಂಜಾ ಹಾಗೂ 400 ರೂಪಾಯಿ ವಶಪಡಿಸಿಕೊಂಡಿದ್ದಾರೆ. ಕುರಿ ಮೇಯಿಸುತ್ತಿದ್ದ ಈತನ ಬಂಧನವಾಗಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.
ಕೇಶ್ವಾಪುರ ಠಾಣೆ ವ್ಯಾಪ್ತಿಯಲ್ಲಿ ಮೂವರನ್ನ ಬಂಧಿಸಿ 600 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನ ಗಾಂಧಿವಾಡಾದ ಯಶವಂತ ಮುನಿಗೇಟ್, ಫೆಸಿಪಿಕ್ ಪಾರ್ಕ್ ರಸ್ತೆಯ ಪ್ರಶಾಂತ ಲಾಜರಸ ಮತ್ತು ಚಾಲುಕ್ಯನಗರದ ನೆಲ್ಸನ್ ಮೈಲಾ ಗುರುತಿಸಲಾಗಿದೆ.
ಎರಡು ಪ್ರತ್ಯೇಕ ಪ್ರಕರಣಗಳ ಬಗ್ಗೆ ಡಿಸಿಪಿ ಕೃಷ್ಣಕಾಂತ ಮಾಹಿತಿ ನೀಡಿದ್ರು.