ದೇವದುರ್ಗದಲ್ಲಿ ಸಿಡಿಲಿಗೆ ಇಬ್ಬರು ಬಲಿ: ಜೊತೆಗಿದ್ದ ಕುರಿಯು ಸಾವು
ರಾಯಚೂರು: ರಭಸವಾಗಿ ಬರುತ್ತಿದ್ದ ಮಳೆಯಿಂದ ತಪ್ಪಿಸಿಕೊಳ್ಳಲು ಮರದ ಕೆಳಗೆ ಹೋಗಿ ನಿಂತಾಗ ಸಿಡಿಲು ಬಡಿದು ಇಬ್ಬರು ಮೃತಪಟ್ಟು, ಮತ್ತಿಬ್ಬರು ಗಾಯಗೊಂಡ ಘಟನೆ ದೇವದುರ್ಗ ತಾಲೂಕಿನ ಖಾನಾಪುರ ಗ್ರಾಮದಲ್ಲಿ ಸಂಭವಿಸಿದೆ.
ರಾತ್ರಿಯಿಂದ ಕೆಲವೊತ್ತು ಮಳೆ ಬಂದಿದ್ದರು ಜಮೀನಿಗೆ ಹೋಗಿದ್ದ ಖಾನಾಪುರ ಗ್ರಾಮದ ನಾಗಪ್ಪ ಮತ್ತು ವೆಂಕಟೇಶ ಘಟನೆಯಲ್ಲಿ ಸಾವಿಗೀಡಾಗಿದ್ದಾರೆ. ಸಾಬಣ್ಣ ಮತ್ತು ರಾಮನಗೌಡ ಎಂಬಿಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಜೋರಾಗಿ ಮಳೆ ಬರುತ್ತಿದ್ದಂತೆ ಓಡಿ ಹೋಗಿ ಮರದ ಕೆಳಗೆ ನಿಂತಾಗ, ಅವರೇ ಸಾಕಿದ ಕುರಿ ಮರಿಯು ಅವರೊಂದಿಗೆ ಬಂದು ಆಸರೆ ಪಡೆಯಿತು. ಆದರೆ, ತಕ್ಷಣವೇ ಬಿದ್ದ ಸಿಡಿಲಿನಿಂದ ಇಬ್ಬರು ಅಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾರೆ. ಜೊತೆಗಿದ್ದ ಕುರಿಯು ಸ್ಥಳದಲ್ಲಿಯೇ ಸಾವಿಗೀಡಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಗಬ್ಬೂರ ಠಾಣೆ ಪೊಲೀಸರು ತನಿಖೆಯನ್ನ ಕೈಗೊಂಡಿದ್ದಾರೆ.