“ಪ್ರಾ.. ಮಾ..” ಚುನಾವಣೆ.. ಹೈಕೋರ್ಟ ನಿರ್ದೇಶನ.. ಹಲವರಿಗೆ ಖುಷಿ.. ಕೆಲವರಿಗೆ ಪುಕ್ ಪುಕ್…

ಬೆಂಗಳೂರು: ಸರಕಾರದಿಂದ ಚುನಾವಣೆಯನ್ನ ನಡೆಸಬಹುದಾದ ಪ್ರಾಥಮಿಕ, ಮಾಧ್ಯಮಿಕ ಹಾಗೂ ಫೆಡರಲ್ ಸಹಕಾರ ಸಂಘಗಳ ಪಟ್ಟಿಯನ್ನ ಕರ್ನಾಟಕ ಉಚ್ಛ ನ್ಯಾಯಾಲಯ ಕೂಡಲೇ ಚುನಾವಣೆಗಳನ್ನ ನಡೆಸಲು ಚುನಾವಣಾ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ.
ಈ ಬಗ್ಗೆ ಅಧಿಕೃತವಾದ ಜ್ಞಾಪನವನ್ನ ಸಹಕಾರ ಚುನಾವಣಾ ಪ್ರಾಧಿಕಾರದ ಆಯುಕ್ತ ಡಾ.ಎನ್.ಎಸ್.ಚನ್ನಪ್ಪಗೌಡ ಹೊರಡಿಸಿದ್ದಾರೆ.
ಈ ಬಗ್ಗೆ ರಾಜ್ಯದ ಪ್ರಾಥಮಿಕ ಸಹಕಾರ ಸಂಘಗಳು, ರಾಜ್ಯದ ಎಲ್ಲ ಮಾಧ್ಯಮಿಕ ಸಹಕಾರ ಸಂಘಗಳು ಹಾಗೂ ರಾಜ್ಯದ ಎಲ್ಲ ಫೆಡರಲ್ ಸಹಕಾರ ಸಂಘಗಳಿಗೆ ಮಾಹಿತಿಯನ್ನ ರವಾನೆ ಮಾಡಿದ್ದಾರೆ.
ವಿಭಾಗ, ಜಿಲ್ಲೆಯಲ್ಲಿ ಚುನಾವಣೆ ನಡೆಸಬಹುದಾದ ಸಹಕಾರ ಸಂಘಗಳ ಅವಧಿ ಮುಗಿದಲ್ಲಿ ಅಥವಾ ಈಗಾಗಲೇ ಆರಂಭವಾಗಿದ್ದರೇ 13.09.2020 ರಂದು ಯಾವ ಹಂತದಲ್ಲಿಯೋ ಆ ಹಂತದಿಂದ ಪ್ರಕ್ತಿಯೆಯನ್ನ ಮುಂದುವರೆಸಿ ನವೆಂಬರ್ 15ರೊಳಗಾಗಿ ಚುನಾವಣೆಗಳನ್ನ ಕಡ್ಡಾಯವಾಗಿ ಪೂರ್ಣಗೊಳಿಸಲು ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲ, ಸಕಾಲದಲ್ಲಿ ಚುನಾವಣೆ ನಡೆಸದೇ ಇದ್ದಲ್ಲಿ ಆಯಾ ಚುನಾವಣಾಧಿಕಾರಿಗಳನ್ನ ನೇ ಹೊಣೆ ಮಾಡಲಾಗುವುದೆಂದು ಚನ್ನಪ್ಪಗೌಡ ಎಚ್ಚರಿಕೆ ನೀಡಿದ್ದಾರೆ.
ಚುನಾವಣೆ ನಡೆಸುವ ಆದೇಶ ಬಂದಿರುವುದರಿಂದ ಕೆಲವರು ಈಗಾಗಲೇ ಭಯ ಶುರುವಾಗಿದೆ. ಚುನಾವಣೆ ನಡೆಯದೇ ಇದ್ದರೇ ಇನ್ನಷ್ಟು ಕೊರೋನಾ ಸಮಯದಲ್ಲಿ ಆಡಳಿತ ನಡೆಸಬಹುದೆಂದುಕೊಂಡವರಿಗೂ ಈ ಆದೇಶ ಬಿಸಿತುಪ್ಪವಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.