Exclusive-ಧಾರವಾಡ- ಶಾಸಕರೂರಿನವರೇ ಪ್ರವಾಹದಲ್ಲಿ: ಐವರಿಗಾಗಿ ನಡೆಯುತ್ತಿದೆ ಕಾರ್ಯಾಚರಣೆ

ಧಾರವಾಡ: ಕಟಾವಿಗೆ ಬಂದಿದ್ದ ಹೆಸರು ಬಿಡಿಸಲು ಹೋಗಿದ್ದ ಐವರು ರಾತ್ರಿಪೂರ್ತಿ ಹಳ್ಳದಲ್ಲಿಯೇ ಸಿಕ್ಕು ಸಮಯ ಕಳೆದಿರುವ ಪ್ರಕರಣ ನಡೆದಿದ್ದು, ಸಂಪರ್ಕ ಸಾಧ್ಯವಾಗದೇ ಬೆಳಗಿನ ಜಾವ ಗೊತ್ತಾಗಿ ಇದೀಗ ಎಲ್ಲರನ್ನೂ ರಕ್ಷಣೆ ಮಾಡುವ ಕಾರ್ಯ ಭರದಿಂದ ಸಾಗಿದೆ.
ನವಲಗುಂದ ತಾಲೂಕಿನ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಸ್ವಗ್ರಾಮವಾದ ಅಮರಗೋಳದ ಕಲ್ಲಪ್ಪ ಹಡಪದ, ಕಲ್ಲಪ್ಪನ ಮಡದಿ ಶೇಖವ್ವ ಹಡಪದ, ಕಲ್ಲಪ್ಪನ ಮಗ ವಿಜಯ ಹಡಪದ, ಕಲ್ಲಪ್ಪನ ಮಗಳು ಗಂಗವ್ವ ಹಡಪದ ಹಾಗೂ ಕಲ್ಲಪ್ಪನ ಸಹೋದರನ ಮಗ ರವಿ ಮಹದೇವಪ್ಪ ಹಡಪದ ಬೆಣ್ಣೆಹಳ್ಳದ ಪ್ರವಾಹದಲ್ಲಿ ಸಿಲುಕಿದ್ದಾರೆ.
ಸೊಟಕನಾಳದ ಬಳಿಯಿರುವ ಹೊಲಕ್ಕೆ ಹೆಸರು ಬಿಡಿಸಲು ಹೋಗಿದ್ದ ಕುಟುಂಬ ಮಳೆಯಿಲ್ಲದೇ ಇರುವುದರಿಂದ ಯಾವುದೇ ತೊಂದರೆಯಾಗುವುದಿಲ್ಲವೆಂದು ಕೆಲಸ ಮಾಡುತ್ತಿದ್ದರು. ಆದರೆ, ಸಂಜೆಯಾಗುತ್ತಿದ್ದಂತೆ ಕಿತ್ತೂರು ಸುತ್ತಮುತ್ತಲೂ ಭಾರೀ ಮಳೆಯಾಗಿದ್ದರಿಂದ ಬೆಣ್ಣೆಹಳ್ಳ ಸಂಪೂರ್ಣ ತುಂಬಿ, ಇವರೆಲ್ಲರೂ ಅಲ್ಲಿಯೇ ಕಾಲ ಕಳೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಯಾರೋಬ್ಬರ ಬಳಿಯೂ ಸಂಪರ್ಕ ಮಾಡದೇ ಇದ್ದ ಪರಿಣಾಮ ಬೆಳಗಿನ ಜಾವ ವಿಷಯ ಗೊತ್ತಾಗಿದೆ. ಗೊತ್ತಾದ ತಕ್ಷಣವೇ ಕಾರ್ಯಾಚರಣೆಗೆ ಮುಂದಾಗಿರುವ ನವಲಗುಂದ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೋಟ್ ತರಿಸುತ್ತಿದ್ದಾರೆ.
ವಿಷಯ ಗೊತ್ತಾದ ತಕ್ಷಣವೇ ತಾಲೂಕು ಆಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆಯನ್ನ ನೀಡಿ, ಜನರನ್ನ ರಕ್ಷಣೆ ಮಾಡಲು ಅಧಿಕಾರಿಗ ವರ್ಗಕ್ಕೆ ಹೇಳಿರುವ ಶಾಸಕ ಶಂಕರ ಪಾಟೀಲಮುನೇನಕೊಪ್ಪ, ಪ್ರತಿ ವಿಷಯದ ಮಾಹಿತಿಯನ್ನ ಪಡೆಯುತ್ತಿದ್ದಾರೆ.
ಹೆಸರು ಬಿಡಿಸಿಕೊಂಡು ಬರಲು ಹೋದವರು. ಸಂಜೆ ಬರುವಾಗ ನೀರು ಹೆಚ್ಚು ಬಂದಿರುವುದು ಗೊತ್ತಾಗಿದೆ. ಸ್ಥಳದಲ್ಲಿಯೇ ಬೀಡು ಬಿಟ್ಟಿರುವ ಪಿಎಸೈ ಜಯಪಾಲ ಪಾಟೀಲ, ಜನರನ್ನ ರಕ್ಷಿಸುವ ಕಾರ್ಯಾದಲ್ಲಿ ಮಗ್ನರಾಗಿದ್ದಾರೆ.