“ಮೂರೂರು” ಹದಿಮೂರು ಜನ ರಕ್ಷಣೆ: ಮಳೆಯಿಲ್ಲದಿದ್ದರೂ ಪ್ರವಾಹ ಬಂದಿದ್ಹೇಗೆ…!

ಧಾರವಾಡ: ಇಂತಹ ಘಟನೆ ರಾಜ್ಯದ ಯಾವುದೇ ಭಾಗದಲ್ಲಿ ನಡೆದಿರಲು ಸಾಧ್ಯವೇಯಿಲ್ಲ. ಕಳೆದ 12 ಗಂಟೆಯಿಂದ ಮೂರು ಪ್ರದೇಶಗಳಲ್ಲಿ ನಡೆದ ಅವಿರತ ಕಾರ್ಯಾಚರಣೆ ಇದು. ರಕ್ಷಣೆಯಾಗಿದ್ದು ಬರೋಬ್ಬರಿ 13 ಜನರ ಜೀವ. ಹೌದು…
ಇಂತಹದೊಂದು ಕಾರ್ಯವನ್ನ ನವಲಗುಂದ ಠಾಣೆ ಪೊಲೀಸರು ಅಗ್ನಿಶಾಮಕ ದಳದ ಸಹಕಾರದೊಂದಿಗೆ ಮಾಡಿ ಮುಗಿಸಿದ್ದಾರೆ.
ಕಳೆದ ರಾತ್ರಿ ಗುಡಿಸಾಗರದಲ್ಲಿ ಮೂವರು, ಸೊಟಕನಾಳದಲ್ಲಿ ಐವರು ಮತ್ತು ಕೊಂಗವಾಡದಲ್ಲಿ ಐವರನ್ನ ರಕ್ಷಣೆ ಮಾಡಲಾಗಿದೆ. ಕಳೆದ ರಾತ್ರಿಯಿಂದಲೇ ನಡೆದಿರುವ ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್ ಚಂದ್ರಶೇಖರ ಮಠಪತಿ, ಸಬ್ ಇನ್ಸಪೆಕ್ಟರ್ ಜಯಪಾಲ ಪಾಟೀಲ, ತಹಶೀಲ್ದಾರ ನವೀನ ಹುಲ್ಲೂರ ನಿರಂತರವಾಗಿ ಭಾಗವಹಿಸಿದ್ದರು.
ಕೊಂಗವಾಡದಲ್ಲಿ ನಡೆದ ಕಾರ್ಯಾಚರಣೆ ಸಮಯದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಆಗಮಿಸಿದ್ದರು.