“ಚಿಗರಿ”ಯಲ್ಲಿ “ದೇವರ ಆಟ”: ನವನಗರದ ಬಳಿ ನಡೆಯುತ್ತಿತ್ತು ಮಹಾದುರಂತ.. ಗ್ರೇಟ್ ಡ್ರೈವರ್ ಸುಣದಾಳ

ಹುಬ್ಬಳ್ಳಿ: ಇಂತಹ ದೃಶ್ಯವನ್ನ ನೀವು ಜೀವನದಲ್ಲಿ ನೋಡುವುದಕ್ಕೆ ಸಾಧ್ಯವೇಯಿಲ್ಲ. ಘಟನೆಯ ನಡೆದು ಬರೋಬ್ಬರಿ ಏಳು ತಿಂಗಳ ಮೂರು ದಿನವಾಗಿದ್ದು, ಅವತ್ತೇನಾದರೂ ದೇವರ ರೂಪದ ಚಾಲಕ ಸ್ವಲ್ಪೇ ಯಾಮಾರಿದ್ದರೂ, 40 ಪ್ರಯಾಣಿಕರ ಸ್ಥಿತಿ ಅದೇನಾಗುತ್ತಿತ್ತೋ ಏನೋ..
ಈ ದೃಶ್ಯ ನೋಡಿ.. ಗಾಬರಿಯಾಗಬೇಡಿ..
ಇದು ಬಿಆರ್ ಟಿಎಸ್ ಚಿಗರಿ ಬಸ್. ಅವತ್ತು 05-2-2020. ಹುಬ್ಬಳ್ಳಿ ಮತ್ತು ದಾರವಾಡ ನಡುವೆ ಚಲಿಸುವ ಚಿಗರಿ ಬಸ್ಸು ನವನಗರ ಬ್ರಿಡ್ಜ್ ಮೇಲೆ ಬಂದಾಗ ಬಸ್ ಚಾಲಕ ಎ.ಎಂ.ಸುಣದಾಳರಿಗೆ ಆರೋಗ್ಯದಲ್ಲಿ ಏರುಪೇರಾಗಿದೆ. ಎರಡ್ಮೂರು ಸಲ ಸಾವರಿಸಿಕೊಂಡು ಬಸ್ ನಿಲ್ಲಿಸಿ, ತಕ್ಷಣವೇ ಕೆಳಗೆ ಬೀಳುತ್ತಾರೆ. ಅಲ್ಲಿದ್ದ ಕೆಲವರು ಮೊದಲು ಮುಟ್ಟಲು ಮುಂದೆ ಬಾರದೇ ಇದ್ದರೂ ಕೆಲವರು ಚಾಲಕನಿಗೆ ಪ್ರಥಮ ಚಿಕಿತ್ಸೆ ನೀಡಿ ಸುಧಾರಿಸುತ್ತಾರೆ.
ಬದುಕು ಜಟಕಾ ಬಂಡಿ.. ವಿಧಿ ಅದರ ಸಾಹೇಬಾ.. ಕುದುರೆ ನೀ.. ಅವನು ಪೇಳ್ದಂತೆ ಪಯಣಿಗನೂ..