ಬಸ್- ಬೈಕ್- ಸಾವು: ಧಾರವಾಡದ ಎಕ್ಸಕ್ಲೂಸಿವ್- ಘಟನೆಯ ಸಿಸಿಟಿವಿ ದೃಶ್ಯ
        ಧಾರವಾಡ: ರಸ್ತೆ ಅಪಘಾತಗಳು ನಗರದಲ್ಲಿ ಹೆಚ್ಚಾಗುತ್ತಿದ್ದು, ಸಾರಿಗೆ ಸಂಸ್ಥೆಯ ಬಸ್ಸಿನಿಂದಲೇ ಅಪಘಾತ ನಡೆದಿದ್ದು, ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದು, ಭೀಕರ ರಸ್ತೆ ಅಪಘಾತದ ಸಿಸಿಟಿವಿ ದೃಶ್ಯಗಳು ಕರ್ನಾಟಕವಾಯ್ಸ್ ಗೆ ಲಭಿಸಿವೆ.
ಇಲ್ಲಿದೆ ನೋಡಿ ಘಟನೆ ಸಿಸಿಟಿವಿ ದೃಶ್ಯ…
ಸಾರಿಗೆ ಸಂಸ್ಥೆಯ ವೋಲ್ವೊ ಬಸ್ ಹಾಗೂ ಬೈಕ ನಡುವೆ ನಡೆದ ಡಿಕ್ಕಿಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಬೈಕ್ ಸವಾರ ಸೋನಾಪುರದ ನಿವಾಸಿ ಮುಕ್ತಿಯಾರ್ ನವಲೂರು ರಾಂಗ್ ರೂಟ್ ನಲ್ಲಿ ಬೈಕ್ ನ್ನ ತಿರುಗಿಸಿದಾಗ ಘಟನೆ ನಡೆದಿದೆ. ಧಾರವಾಡದ ಹೊಸ ಬಸ್ ನಿಲ್ದಾಣದ ಸಮೀಪ ನಡೆದ ಈ ಘಟನೆಯ ದೃಶ್ಯ ಬೆಚ್ಚಿಬೀಳಿಸುತ್ತದೆ.
ವೋಲ್ವೋ ಬಸ್ ಬೆಳಗಾವಿಯಿಂದ ರಭಸವಾಗಿ ಬರುತ್ತಿದ್ದರೂ ಬೈಕ್ ಸವಾರ ಅದನ್ನ ಲೆಕ್ಕಿಸದೇ ಬೈಕ್ ಮುಂದೇ ಬಿಡುತ್ತಾನೆ. ಆಗ ನಿಯಂತ್ರಣ ಸಿಗದ ಸಾರಿಗೆ ಬಸ್ ಬೈಕಿಗೆ ಡಿಕ್ಕಿ ಹೊಡೆದು ಆತ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ. ಧಾರವಾಡ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
                      
                      
                      
                      
                      
                        