ನಾನು ಕಾಂಗ್ರೆಸ್ ಸೇರಿಲ್ಲ: ಎಂ.ಎಸ್.ಅಕ್ಕಿ- ಸುಳ್ಳೆ ಸುಳ್ಳು ಪ್ರಚಾರ ಮಾಡಿದ ಕಾಂಗ್ರೆಸ್ಸಿಗರು..!

ಹುಬ್ಬಳ್ಳಿ: ನಾನು ಮಾಜಿ ಸಂತೋಷ ಲಾಡರನ್ನ ಭೇಟಿಯಾಗಲು ಹೋಗಿದ್ದೆ. ಅದನ್ನೇ ನಾನು ಕಾಂಗ್ರೆಸ್ಸಿಗೆ ಸೇರಿದ್ದೇನೆ ಎಂದು ಹಾಕಿದ್ದಾರೆ. ನಾನೂ ಕಾಂಗ್ರೆಸ್ ಗೆ ಸೇರ್ಪಡೆಯಾಗಿಲ್ಲ ಎಂದು ಕುಂದಗೋಳದ ಮಾಜಿ ಶಾಸಕ ಎಂ.ಎಸ್.ಅಕ್ಕಿ ಹೇಳಿದ್ದಾರೆ.
ಎರಡು ದಿನಗಳ ಹಿಂದೆ ಮಾಜಿ ಸಚಿವ ಹಾಗೂ ಕಲಘಟಗಿ ಕ್ಷೇತ್ರದ ಮಾಜಿ ಶಾಸಕ ಸಂತೋಷ ಲಾಡ ಎರಡು ವರ್ಷಗಳ ನಂತರ ಕ್ಷೇತ್ರಕ್ಕೆ ಬಂದಿದ್ದರು. ಅದೇ ಸಮಯದಲ್ಲಿ ಕೆಲವರೊಂದಿಗೆ ಬಂದು ಭೇಟಿಯಾಗಿದ್ದ ಮಾಜಿ ಶಾಸಕ ಎಂ.ಎಸ್.ಅಕ್ಕಿ, ಉಭಯಕುಶಲೋಪರಿ ನಡೆಸಿದ್ದರು.
ಇದಾದ ಮರುದಿನವೇ ಕಾಂಗ್ರೆಸ್ ವಲಯದ ವಾಟ್ಸಾಫ್ ಗ್ರೂಫಗಳಲ್ಲಿ ಎಂ.ಎಸ್.ಅಕ್ಕಿ ಸಂತೋಷ ಲಾಡರೊಂದಿಗಿದ್ದ ಗ್ರೂಫ ಪೋಟೋವೊಂದನ್ನ ಹಾಕಿ, ಕಾಂಗ್ರೆಸ್ ಪಕ್ಷಕ್ಕೆ ಲಾಡ ಬರಮಾಡಿಕೊಂಡರು ಎಂದು ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡುತ್ತಿದ್ದಾರೆ.
ಈ ಬಗ್ಗೆ ಸ್ವತಃ ಮಾತನಾಡಿರುವ ಎಂ.ಎಸ್.ಅಕ್ಕಿ, ನಾನೂ ಕಾಂಗ್ರೆಸ್ ಗೆ ಸೇರ್ಪಡೆಯಾಗಿಲ್ಲ. ಸುಮ್ಮನೆ ಹಾಗೇ ಪ್ರಚಾರ ಮಾಡಲಾಗಿದೆ. ಈಗ ಅಂತಹದೇನು ನಡೆದಿಲ್ಲ ಎನ್ನುತ್ತಿದ್ದಾರೆ.
ಸಂತೋಷ ಲಾಡ ಕೂಡಾ ಬೇರೆ ಕ್ಷೇತ್ರದ ಪ್ರಮುಖರನ್ನ ಯಾಕೆ ಸೇರಿಸಿಕೊಳ್ಳುತ್ತಾರೆ. ಇದರಿಂದ ರಾಜಕಾರಣದಲ್ಲಿ ಏನೇಲ್ಲಾ ನಡೆಯಬಹುದು. ಕುಂದಗೋಳ ಕ್ಷೇತ್ರದಲ್ಲಿ ಶಾಸಕಿ ಕುಸಮಾವತಿ ಶಿವಳ್ಳಿಯವರ ಮೇಲೆ ಇದು ಯಾವ ಪರಿಣಾಮ ಬೀಳತ್ತೆ ಎಂಬುದರ ವಿಚಾರವೂ ಇಲ್ಲದೇ, ಕಲಘಟಗಿಯ ಪ್ರಮುಖರು ಈ ಥರಾ ಪ್ರಚಾರ ಮಾಡುತ್ತಿರುವುದು ಏಕೆ ಎಂಬುದು ಯಕ್ಷಪ್ರಶ್ನೆಯಾಗಿದೆ.