ಗ್ರಾಮೀಣಾಭಿವೃದ್ಧಿ ಕನಸು ಕಂಡ ಪಿಡಿಓ ಆತ್ಮಹತ್ಯೆ

ವಿಜಯಪುರ: ಗ್ರಾಮೀಣ ಭಾಗದ ಅಭಿವೃದ್ಧಿಯ ಕನಸು ಕಂಡು ನೌಕರಿ ಮಾಡುತ್ತಿದ್ದ ಕಡ್ಲಿಮಟ್ಟಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಪತ್ನಿಯ ಊರಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ಬಾಗಲಕೋಟೆ ಜಿಲ್ಲೆಯ ಕಡ್ಲಿಮಟ್ಟಿ ಗ್ರಾ. ಪಂ. ಪಿಡಿಓ ಮಂಜುನಾಥ ಈರಪ್ಪ ಬ್ಯಾಹಟ್ಟಿ ಆತ್ಮಹತ್ಯೆಗೆ ಶರಣಾದ ದುರ್ದೈವಿಯಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಪಿಡಿಓಯೋರ್ವರು ಪತ್ನಿಯ ತವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ನಗರದ ಎಸ್.ಆರ್.ಕಾಲನಿಯಲ್ಲಿ ನಡೆದಿದೆ.
ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ವಿಜಯಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಅನಾರೋಗ್ಯ ಹೆಚ್ಚಾಗಿದ್ದರಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ವಿಜಯಪುರ ನಗರದ ಜಲನಗರ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೈಕ್ಷಣಿಕವಾಗಿ ಮುಂದುವರೆದಿರುವ ಜನರೇ ಇಂತಹ ನಿರ್ಧಾರಗಳನ್ನ ತೆಗೆದುಕೊಳ್ಳುತ್ತಿರುವುದು ಖೇದಕರ ಸಂಗತಿಯಾಗಿದೆ. ಇಲ್ಲಿಯೂ ಕೂಡಾ ಮಾನಸಿಕವಾಗಿ ಕುಗ್ಗುವ ಮನಸ್ಥಿತಿ ಹೆಚ್ಚಾಗುತ್ತಿದೆಯೋ ಎಂಬುದನ್ನ ಇಲಾಖೆಯೂ ಅರ್ಥ ಮಾಡಿಕೊಳ್ಳಬೇಕಿದೆ.