ಬಾಲವಿಕಾಸ ಅಕಾಡೆಮಿ ಅಧ್ಯಕ್ಷರಿಗೆ ಗ್ರಾಮೀಣ ಶಿಕ್ಷಕರಿಂದ ಗೌರವ ಅಭಿನಂದನೆ
ಹುಬ್ಬಳ್ಳಿ: ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದಿಂದ ನೂತನವಾಗಿ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಈರಣ್ಣ ಜಡಿಯವರನ್ನ ಗೌರವಿಸಿ ಅಭಿನಂದಿಸಲಾಯಿತು.
ರಾಜ್ಯದ ಎರಡು ಕೋಟಿ ಮಕ್ಕಳಿಗೆ ಬಾಲ ವಿಕಾಸ ಅಕಾಡೆಮಿ ವತಿಯಿಂದ ಕ್ರಿಯಾಶೀಲ ಚಟುವಟಿಕೆ ಮಕ್ಕಳ ಮೇಳ ಮಕ್ಕಳ ಹಬ್ಬ ಮಕ್ಕಳ ಜಾತ್ರೆ ಆಟೋಟ ಕಲೆ ನೃತ್ಯ ಸಾಹಸ ಪ್ರತಿಭಾ ಪುರಸ್ಕಾರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು. ಇದಕ್ಕೆ ನಾಡಿನ ಶಿಕ್ಷಕರ ವಿವಿಧ ಸಂಘ ಸಂಸ್ಥೆಗಳ ಸಹಕಾರ ಕೋರಲಾಗುವುದು ಎಂದು ಅಧ್ಯಕ್ಷ ಈರಣ್ಣ ಜಡಿ ತಿಳಿಸಿದರು.
ಜಡಿಯವರ ಮಾತನ್ನ ಗೌರವಿಸಿ, ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ, ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶಿಕ್ಷಕರು ಸದಾಕಾಲ ನಿಮ್ಮೊಂದಿಗೆ ಇರುತ್ತಾರೆ. ಗ್ರಾಮೀಣ ಸಂಘವಂತೂ ಮಕ್ಕಳಿಗಾಗಿ ಏನೇ ಒಳ್ಳೆಯ ಕಾರ್ಯಕ್ರಮ ನಡೆದರೂ ಸದಾಕಾಲ ಮುಂಚೂಣಿಯಲ್ಲಿ ನಿಂತು ನಿರ್ವಹಣೆ ಮಾಡುತ್ತೇವೆಂದರು.
ಸಂಘದ ರಾಜ್ಯ ಕಾರ್ಯಾಧ್ಯಕ್ಷ ಶರಣಪ್ಪಗೌಡ ಆರ್. ಕೆ, ರಾಜ್ಯ ಉಪಾಧ್ಯಕ್ಷ ಗೋವಿಂದ ಜುಜಾರೆ, ಡಿ.ಟಿ. ಬಂಡಿವಡ್ಡರ ಉಪಸ್ಥಿತರಿದ್ದರು