ಹುಬ್ಬಳ್ಳಿಯಲ್ಲಿ ಮತ್ತೆ ನಾಲ್ವರು “ಗಾಂಜಿಗರ” ಬಂಧನ: ಪ್ರಮುಖರೇ ಸಿಕ್ಕಿಬಿದ್ದರು

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಮೂಲೆ ಮೂಲೆಯಲ್ಲೂ ನಡೆಯುತ್ತಿರುವ ಗಾಂಜಾ ಮಾರಾಟವನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗುತ್ತಿದ್ದು, ಬುಡಸಮೇತ ಗಾಂಜಾ ದಂಧೆಯನ್ನ ಹತ್ತಿಕ್ಕುವ ಮುನ್ಸೂಚನೆ ಕಾಣತೊಡಗಿದ್ದು, ಶಹರ ಠಾಣೆಯ ಪೊಲೀಸರು ಭರ್ಜರಿ ಬೇಟೆಯನ್ನೇ ಆಡಿದ್ದಾರೆ. ಸಂಪೂರ್ಣ ಮಾಹಿತಿಯನ್ನ ಓದಿ..
ರೇಲ್ವೆ ಸ್ಟೇಷನ್ ಹತ್ತಿರದ ರಾಜಗೋಪಾಲದನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಹುಬ್ಬಳ್ಳಿಯ ಯುವಕರನ್ನೇ ಶಹರ ಠಾಣೆಯ ಪೊಲೀಸರು ಬಂಧನ ಮಾಡಿದ್ದಾರೆ. ಬಂಧಿತ ನಾಲ್ವರನ್ನ ಬಮ್ಮಾಪುರ ಓಣಿಯ ಪಕ್ಕದಲ್ಲಿರುವ ಕುಂಬಾರ ಓಣಿಯಅಲ್ತಾಪ ನದಾಫ್, ಮೌಲಾಲಿ ಬ್ಲಾಕ್ ನ ನಿಂಗಪ್ಪ ಚಿಕ್ಕೋಪ್ಪ, ಮಿಲ್ಲತನಗರ ನಿವಾಸಿ ವಾಸೀಮ ಶೇಖ ಹಾಗೂ ಅರಳಿಕಟ್ಟಿ ಓಣಿಯ ರೋಹನ ಹಬೀಬ ಎಂದು ಗುರುತಿಸಲಾಗಿದೆ.
ಬಂಧಿತ ನಾಲ್ವರು ಯುವಕರಿಂದ 475 ಗ್ರಾಂ ಗಾಂಜಾ ಮತ್ತು 510 ರೂಪಾಯಿಗಳನ್ನ ವಶಕ್ಕೆ ಪಡೆದಿದ್ದಾರೆ. ಈ ನಾಲ್ವರು ಯುವಕರು ಬೇರೆ ಬೇರೆ ಉದ್ಯೋಗ ಮಾಡುವ ನೆಪದಲ್ಲಿ ಗಾಂಜಾವನ್ನ ಮಾರಾಟ ಮಾಡುತ್ತಿದ್ದರೆಂದು ಗೊತ್ತಾಗಿದೆ.
ಹುಬ್ಬಳ್ಳಿ-ಧಾರವಾಡದಲ್ಲಿ ಪ್ರಮುಖ ಗಾಂಜಾ ಪ್ರಕರಣಗಳಲ್ಲಿ ಇದು ಬಹುಮುಖ್ಯವಾಗಿದ್ದಾಗಿದೆ. ಇದರಲ್ಲಿ ಸಿಕ್ಕಿಬಿದ್ದಿರುವ ಯುವಕರ ದಂಧೆಯ ರೀತಿ ವಿಭಿನ್ನವಾಗಿದೆ. ತಾವು ಮಾಡುತ್ತಿದ್ದ ಕೆಲಸದ ಸ್ಥಳದಲ್ಲಿಯೂ ಇಂತಹ ಕೃತ್ಯ ಮಾಡುತ್ತಿದ್ದರ ಬಗ್ಗೆ ಮಾಹಿತಿಯನ್ನ ಕಲೆ ಹಾಕಲಾಗುತ್ತಿದೆ.
ಇನ್ಸ್ ಪೆಕ್ಟರ್ ಎಂ.ಎಸ್.ಪಾಟೀಲ ನೇತೃತ್ವದಲ್ಲಿ ಪಿಎಸೈ ಬಿ.ಎನ್.ಸಾತನ್ನನವರ, ಎಸೈ ಚಪ್ಪರಮನಿ, ಎಸ್.ಎ.ಕಲಘಟಗಿ, ಚಂದ್ರು ಚೆಲವಾದಿ, ಪ್ರಕಾಶ ಗೋವಿಂದಪ್ಪನವರ, ನಂದೇರ್ ಕಾರ್ಯಾಚರಣೆಯ ನೇತೃತ್ವ ವಹಿಸಿ, ಆರೋಪಿಗಳನ್ನ ಪತ್ತೆ ಹಚ್ಚಿದ್ದಾರೆ.