ಹುಬ್ಬಳ್ಳಿಯಲ್ಲಿ ಬಾಲಾಜಿ ಟ್ರೇಡರ್ಸ್ ಮೇಲೆ ಬೃಹತ್ ರೇಡ್: ಐಜಿ ತಂಡದ ಕಾರ್ಯಾಚರಣೆ: ಕಳ್ಳ-ಅಕ್ಕಿಗೆ ಬಿತ್ತು ಬಲೆ

ಹುಬ್ಬಳ್ಳಿ: ಅಕ್ರಮವಾಗಿ ಕ್ರೋಢಿಕರಿಸಿದ ಅಕ್ಕಿ ಗೋದಾಮಿನ ಮೇಲೆ ಪೊಲೀಸರ ತಂಡ ದಾಳಿ ಮಾಡಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ಕಿಯನ್ನ ಜಪ್ತಿ ಮಾಡಲಾಗಿದ್ದು, ಕೊರೋನಾ ಸಮಯದಲ್ಲೂ ಅಕ್ರಮವಾಗಿ ಖರೀದಿಸಿದ್ದ ಪಡಿತರ ಅಕ್ಕಿ ಕೊನೆಗೂ ಪೊಲೀಸ್ ಕವಚದಲ್ಲಿ ಸಿಕ್ಕಿಕೊಂಡಿದೆ.
ಹುಬ್ಬಳ್ಳಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ಶಾಫ್ ಸಂಖ್ಯೆ 172 ಹೊಂದಿರುವ ಶ್ರೀ ಬಾಲಾಜಿ ಟ್ರೇಡರ್ಸ್ ಕಂಪನಿಯ ಗೋಡೌನ್ ಬಂಕಾಪುರ ಚೌಕ ಬಳಿಯಿದ್ದು, ನೂರಕ್ಕೂ ಹೆಚ್ಚು ಪೊಲೀಸರು ದಾಳಿ ಮಾಡಿ ಅಕ್ರಮವನ್ನ ಪತ್ತೆ ಹಚ್ಚುತ್ತಿದ್ದಾರೆಂದು ಹೇಳಲಾಗಿದೆ.
ಹಲವು ವರ್ಷಗಳಿಂದ ನಡೆಯುತ್ತಿದ್ದ ದಂಧೆಯ ಬಗ್ಗೆ ಆರೋಪಗಳಿದ್ದರೂ ಕೂಡಾ, ಯಾವುದೇ ರೀತಿಯ ಪೊಲೀಸ್ ದಾಳಿಗಳು ನಡೆದಿರಲಿಲ್ಲ. ಶ್ರೀ ಬಾಲಾಜಿ ಟ್ರೇಡರ್ಸ್ ಮಾಲೀಕನನ್ನ ವಿಚಾರಣೆ ನಡೆಸುವ ಸಾಧ್ಯತೆಯಿದ್ದು, ನೂರಾರೂ ಚೀಲ ಅಕ್ಕಿ ಸಿಕ್ಕಿದೆ ಎಂದು ಹೇಳಲಾಗಿದೆ.
ಕಳೆದ ಎರಡು ಗಂಟೆಯಿಂದಲೂ ದಾಳಿ ಮುಂದುವರೆದಿದ್ದು, ಇನ್ನೂ ನಿರಂತರವಾಗಿ ನಡೆಯುತ್ತಿದೆ. ಹುಬ್ಬಳ್ಳಿಯ ಪೊಲೀಸರು ಸ್ಥಳದಲ್ಲಿದ್ದು, ತನಿಖೆಯನ್ನ ಮಾತ್ರ ಐಜಿ ತಂಡವೇ ಮಾಡುತ್ತಿದೆ ಎಂದು ಹೇಳಲಾಗಿದೆ.