ಹುಬ್ಬಳ್ಳಿಯಲ್ಲಿ ದೇವಿ ಕ್ರಾಫ್ ಮೇಲೆ ದಾಳಿ: ಅಂಗಡಿಗೆ ಬೀಗ
ಹುಬ್ಬಳ್ಳಿ: ನೊಂದಾಯಿತವಲ್ಲದ ಮತ್ತು ಪರವಾನಿಗೆ ಅನುಮತಿಸದ ಕೀಟನಾಶಕಗಳನ್ನು ಮಾರಾಟ ಮಾಡುತ್ತಿದ್ದ ಹುಬ್ಬಳ್ಳಿಯ ನ್ಯೂ ಕಾಟನ್ ಮಾರ್ಕೆಟ್ ನಲ್ಲಿರುವ ಮೆ || ದೇವಿ ಕ್ರಾಪ್ ಸೈನ್ಸ ಪ್ರೈ.ಲಿ. ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ಇಂದು ದಾಳಿ ನಡೆಸಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾರಾಟಕ್ಕೆ ಅನುಮತಿ ಇರದ 7543 ಲೀ ಹಾಗೂ 1011 ಕೆಜಿ ನೈಟ್ರೋಬೆಂಜಿನ್ ಕೀಟನಾಶಕ ದೊರಕಿತು. ಕೀಟನಾಶಕ ಕಾಯ್ದೆಯ 1968 ಸೆಕ್ಷನ್ 29(1) (ಸಿ) ಮತ್ತು 29(1) (ಬಿ) ರಂತೆ ಮಾರಾಟಗಾರ ಮೇಲೆ ಪ್ರಕರಣ ದಾಖಲಿಸಿ, ಕೀಟನಾಶಕಗಳನ್ನು ಜಪ್ತಿ ಮಾಡಿ ಮೊಹರು ಹಾಕಿ ಸೀಲ್ ಹಾಕಲಾಯಿತು.
ದಾಳಿ ವೇಳೆ ಬೆಳಗಾವಿ ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೊಕಾಶಿ, ಉಪಕೃಷಿ ನಿರ್ದೇಶಕರುಗಳಾದ ಎಂ.ಬಿ.ಅಂತರವಳ್ಳಿ, ವೆಂಕಟರಮಣಪ್ಪ, ಸಹಾಯಕ ಕೃಷಿ ನಿರ್ದೇಶಕರುಗಳಾದ ಮಹಾಂತೇಶ ಕಿಣಗಿ, ಆರ್.ಎ.ಅಣಗೌಡರ, ರಾಘವೇಂದ್ರ ಬಮ್ಮಿಗಟ್ಟಿ, ಕೃಷಿ ಅಧಿಕಾರಿ ಮಮತಾ ಗೊರವರ, ವಿ.ಬಿ.ಪುರಾಣಿಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.