“ಬಸಪ್ಪ-ಖಾನಾವಳಿ-ಬಾಬಾ” ಮಹೇಶನ ಮಾನವೀಯತೆ
ಧಾರವಾಡ: ವಿದ್ಯಾನಗರಿ ಧಾರವಾಡಕ್ಕೆ ಬಂದವರಿಗೆ ಧಾರವಾಡ ಪೇಢೆ ಎಷ್ಟು ಗೊತ್ತೋ ಅಷ್ಟೇ ಪ್ರೀತಿಯಿಂದ ಬಸಪ್ಪ ಖಾನಾವಳಿಯೂ ಗೊತ್ತಿದೆ. ಅಂತಹ ರೊಟ್ಟಿ ಊಟಕ್ಕೆ ಅದು ಫೇಮಸ್ಸು.ಅದು ಊಟಕ್ಕಷ್ಟೇ ಸಿಮೀತವಾಗಿಲ್ಲ, ಮಾನವೀಯತೆಗೂ ಪ್ರಸಿದ್ಧವಾದದ್ದು. ಅಂತಹ ಖಾನಾವಳಿ ಮಾಲೀಕನ ಮತ್ತೊಂದು ಮಾನವೀಯ ಗುಣವೇನು ಎಂಬುದನ್ನ ಪೂರ್ತಿಯಾಗಿ ಓದಿ ತಿಳಿಯಿರಿ.
ಹುಬ್ಬಳ್ಳಿಯಲ್ಲಿರುವ ರಾಷ್ಟ್ರೋತ್ಥಾನ ರಕ್ತ ಭಂಡಾರದಲ್ಲಿ ಎರಡು ಕೈಗಳಲ್ಲಿ ಹಿಡಿದುಕೊಂಡಿರುವುದು ಪ್ಲಾಸ್ಮಾ. ಈ ಭಾವಚಿತ್ರದಲ್ಲಿರುವವರೇ ಮಹೇಶ ಮಾಳಗೊಂಡ, ಪ್ರೀತಿಯಿಂದ ಬಹುತೇಕರಿಗೆ ‘ಬಾಬಾ’ ಎಂದೇ ಪರಿಚಿತರು.
ಧಾರವಾಡದ ಕೋರ್ಟ್ ವೃತ್ತದಲ್ಲಿರುವ ಬಸಪ್ಪ ಖಾನಾವಳಿಯ ರುಚಿಯನ್ನ ಕಂಡವರು ಇವರನ್ನ ನೋಡಿಯೇ ಇರುತ್ತಾರೆ. ಆದರೆ, ಅವರಲ್ಲಿರುವ ಮಾನವೀಯತೆ ಬಗ್ಗೆ ಹೇಳಲು ಕೂಡಾ ಹೋಗುವುದಿಲ್ಲ. ಯಾರಿಗೂ ತಿಳಿಯದ ಹಾಗೇ ಪ್ಲಾಸ್ಮಾ ಕೊಟ್ಟು ಅನೇಕರಿಗೆ ಉಪಯೋಗವಾಗಿರುವ ಇವರ ಕಾರ್ಯ ಎಲ್ಲರೂ ಮೆಚ್ಚುವಂತಹದು.
ಡಿಯರ್ ಮಹೇಶಣ್ಣ ನಿನ್ನ ಕಾರ್ಯ ಮತ್ತೋಬ್ಬರಿಗೆ ಸ್ಪೂರ್ತಿಯಾಗಲಿ ಎಂದು ನಾವೂ ಕೂಡಾ ಬಯಸುತ್ತೇವೆ. ಗುಡ್ ಲಕ್..