Posts Slider

Karnataka Voice

Latest Kannada News

ಧಾರವಾಡ ಜಿಲ್ಲೆ ಸೇರಿ 130 ತಾಲೂಕುಗಳು ಅತಿವೃಷ್ಠಿ/ಪ್ರವಾಹ ಪೀಡಿತ ಘೋಷಣೆ

Spread the love

ಬೆಂಗಳೂರು: ಮುಂಗಾರಿನ ಹಂಗಾಮಿನ ಆಗಷ್ಟನಲ್ಲಿ ರಾಜ್ಯದಲ್ಲಿ ಸುರಿದ ಮಳೆ ಹಾಗೂ ಮಹಾರಾಷ್ಟ್ರದಿಂದ ಹರಿದು ಬಂದ ನೀರಿನಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಪ್ರವಾಹ ಬಂದು ಹಲವು ತೊಂದರೆಗಳಾಗಿದ್ದರಿಂದ ರಾಜ್ಯ ಇಂದು 23 ಜಿಲ್ಲೆಯ 130 ತಾಲೂಕುಗಳನ್ನ ಅತಿವೃಷ್ಠಿ/ಪ್ರವಾಹ ಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಿ ಆದೇಶ ಹೊರಡಿಸಿದೆ.

ಧಾರವಾಡ ಜಿಲ್ಲೆಯ ಎಲ್ಲ ತಾಲೂಕುಗಳನ್ನ ಈ ಯೋಜನೆಯಲ್ಲಿ ಘೋಷಣೆ ಮಾಡಲಾಗಿದೆ. ಘೋಷಣೆ ಮಾಡಿದ ತಾಲೂಕುಗಳಲ್ಲಿ ಎಸ್ ಡಿ ಆರ್ ಎಫ್ ಮತ್ತು ಎನ್ ಡಿ ಆರ್ ಎಫ್ ಮಾರ್ಗಸೂಚಿಯ ಪ್ರಕಾರ ಪರಿಹಾರ ಕಾರ್ಯಗಳಿಗೆ ಸರಕಾರದಿಂದ ಚಾಲನೆ ನೀಡಲಿದೆ.

ಈ ಬಗ್ಗೆ ಅಧಿಕೃತವಾಗಿ ಕಂದಾಯ ಇಲಾಖೆಯ ಸರಕಾರದ ಜಂಟಿ ಕಾರ್ಯದರ್ಶಿ ಕೆ.ಉಮಾಪತಿ ಆದೇಶವನ್ನ ಹೊರಡಿಸಿದ್ದು, ಪ್ರತಿ ಜಿಲ್ಲಾಧಿಕಾರಿಗೂ ಪ್ರತಿಯನ್ನ ರವಾನೆ ಮಾಡಲಾಗಿದೆ.


Spread the love

Leave a Reply

Your email address will not be published. Required fields are marked *