ಅಯ್ಯೋ.. ಮಾಳಾಪುರದಲ್ಲಿ ಹಗಲಲ್ಲೂ ಕತ್ತಲು.. ಕೆಇಬಿಯವರ ಚಮತ್ಕಾರ..
ಧಾರವಾಡ: ಇಡೀ ಭಾರತವೇ ಬೆಳಕಿನಲ್ಲಿ ದಿನ ಕಳೆಯುತ್ತಿದ್ದರೇ ಧಾರವಾಡದ ಮಾಳಾಪುರದಲ್ಲಿ ಮಾತ್ರ ಕತ್ತಲು ಆವರಿಸಿದಯಂತೆ. ಅದೇ ಕಾರಣಕ್ಕೆ ಕೆಇಭಿಯವರು ಹಗಲಿನಲ್ಲೇ ವಿದ್ಯುತ್ ದೀಪಗಳನ್ನ ಹಚ್ಚಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತಿದ್ದಾರಂತೆ.. ಸಂಶಯವಿದ್ದರೇ ನೀವೇ ವೀಡಿಯೋವನ್ನ ನೋಡಿ.
ವೀಡಿಯೋ
ಧಾರವಾಡದ ಮಾಳಾಪುರದಲ್ಲಿ ಬೆಳಗಿನ ಜಾವವೇ ತೆಗೆಯಬೇಕಾಗಿದ್ದ ವಿದ್ಯುತ್ ದೀಪಗಳನ್ನ ಮದ್ಯಾಹ್ನವಾದರೂ ತೆಗೆದೇಯಿಲ್ಲ. ಹೀಗಾಗಿ ಸಾರ್ವಜನಿಕರ ಹಣ ವಿದ್ಯುತ್ ಮೂಲಕವೂ ಖಾಲಿಯಾಗುತ್ತಿದೆ. ಕೆಇಭಿಯವರೇಕೆ ಹೀಗೆ ಮಾಡುತ್ತಾರೆಂಬುದು ಪ್ರಜ್ಞಾವಂತರ ಪ್ರಶ್ನೆ.