ರಾಯಚೂರು: ಜಮೀನಿನಲ್ಲೇ ಗಾಂಜಾ ಬೆಳೆದ ಭೂಪ
ರಾಯಚೂರು: ಜಮೀನಿನಲ್ಲೇ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದ ಪ್ರಕರಣವನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾದ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗುರು ತಾಲ್ಲೂಕಿನ ಗುಜಲೋರದೊಡ್ಡಿ ಗುರುಗುಂಟಾ ಸಂಭವಿಸಿದೆ.
ಪರಶುರಾಮ ಎನ್ನುವ ರೈತ ತಮ್ಮ ಜಮೀನಿನಲ್ಲಿ ಗಾಂಜಾ ಬೆಳೆದಿದ್ದ. ಪೊಲೀಸರ ಕಾರ್ಯಾಚರಣೆಯಲ್ಲಿ ಒಂಬತ್ತು ಕೆಜಿಯಷ್ಟು ಹಸಿ ಗಾಂಜಾ ಸಿಕ್ಕಿದ್ದು, ಆರೋಪಿಯ ಸಮೇತ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಜ್ಯದಲ್ಲಿ ಗಾಂಜಾ ಪ್ರಕರಣಗಳು ದಿನೇ ದಿನೇ ಹೆಚ್ಚು ಪತ್ತೆಯಾಗಿದ್ದು, ಆಂದ್ರಪ್ರದೇಶಕ್ಕೆ ಅಂಟಿಕೊಂಡ ಜಿಲ್ಲೆಗಳ ಕೆಲಭಾಗದಲ್ಲಿ ರೈತರು, ಜಮೀನಿನಲ್ಲೇ ಗಾಂಜಾ ಬೆಳೆದ ಪ್ರಕರಣಗಳು ಪತ್ತೆಯಾಗಿವೆ.
ರಾಜಧಾನಿಯಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಸಿನೇಮಾದ ನಟಿಯರು ಸಿಕ್ಕಿಕೊಂಡ ನಂತರ ಬಹುತೇಕ ಜಿಲ್ಲೆಗಳಲ್ಲಿ ಗಾಂಜಾದ ಮೇಲೆ ದಾಳಿಗಳು ನಡೆಯುತ್ತಿವೆ. ದಿನಕ್ಕೆ ಹಲವು ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿವೆ.