ನಿವೃತ್ತ ಮೃತ ಸಾರಿಗೆ ಸಿಬಂದಿ ಪತ್ನಿಯರಿಗೆ ಉಚಿತ ಬಸ್ ವಿತರಣೆ
ಹುಬ್ಬಳ್ಳಿ: ವಾ.ಕ.ರ.ಸಾ.ಸಂಸ್ಥೆ ನಿವೃತ್ತ ಮೃತ ನೌಕರರ ಪತ್ನಿಯರಿಗೆ ಜೀವನ ಪರ್ಯಂತ ಉಚಿತವಾಗಿ ಪ್ರಯಾಣಿಸುವ ಬಸ್ ಪಾಸ್ ಗಳನ್ನು ಸಂಸ್ಥೆಯ ಅಧ್ಯಕ್ಷ ಬಿ.ಎಸ್.ಪಾಟೀಲ ಹುಬ್ಬಳ್ಳಿ ವಿಭಾಗೀಯ ಕಚೇರಿಯಲ್ಲಿ ವಿತರಿಸಿದರು.
ಸಾರಿಗೆ ಇಲಾಖೆಯಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿ ಮೃತಪಟ್ಟ ನೌಕರರಿಗೆ ಹೊಸದೊಂದು ಯೋಜನೆಯನ್ನ ರೂಪಿಸಿ, ಪಾಸ್ ನೀಡಿರುವುದು ಕುಟುಂಬಕ್ಕೆ ಅನುಕೂಲವಾಗಲಿದೆ. ಸಂಸ್ಥೆಯ ಯಾವುದೇ ಬಸ್ ಗಳಲ್ಲೂ ಉಚಿತವಾಗಿ ಸಂಚರಿಸುವ ಪಾಸ್ ಇದಾಗಿದೆ.
ಈ ಸಂದರ್ಭದಲ್ಲಿ ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಪಿ.ವಾಯ್.ನಾಯಕ, ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ್, ವಿಭಾಗೀಯ ಸಂಚಾರ ಅಧಿಕಾರಿ ಅಶೋಕ್ ಪಾಟೀಲ, ಲೆಕ್ಕಾಧಿಕಾರಿ ಸಂಜಯ ಮಾಸುಮತಿ,ಉಗ್ರಾಣಾಧಿಕಾರಿ ಎನ್.ಎಫ್.ಹೊಸಮನಿ, ಆಡಳಿತಾಧಿಕಾರಿ ನಾಗಮಣಿ ಬೊವಿ, ನೌಕರರ ಕ್ಷೇಮಾಭಿವೃದ್ಧಿ ಸಂಘದ ಎಂ.ಎಲ್.ಮುಂಡರಗಿ, ನಿವೃತ್ತ ಸಹಾಯಕ ಸಂಚಾರ ನಿರೀಕ್ಷಕ ಜಿ.ಜಿ.ಹುಯಿಲಗೋಳ, ಸಂಸ್ಥೆಯ ನಿರ್ದೇಶಕ ಅಶೋಕ ಮಳಗಿ ಉಪಸ್ಥಿತಿರಿದ್ದರು.