ಶಾಸಕ ಅಮೃತ ದೇಸಾಯಿ ಅಭಿವೃದ್ಧಿ ಪರ್ವ: ನಾಳೆಯಿಂದ ಶುರುವಾಗಲಿದೆ ಕಾರ್ಯಕ್ರಮ
ಧಾರವಾಡ: ಕೊರೋನಾ ವೈರಸ್ ಹಬ್ಬಿರುವ ಸಮಯದಲ್ಲೂ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ನಾಳೆಯಿಂದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಸಿಗಲಿದೆ. ಒಂದೇ ವಾರ್ಡಿನಲ್ಲಿ 3 ಕೋಟಿ ರೂಪಾಯಿಯ ಕಾಮಗಾರಿಗೆ ನಾಳೆ ಚಾಲನೆ ಸಿಗಲಿದೆ.
ಗ್ರಾಮೀಣ ಕ್ಚೇತ್ರದ ಶಾಸಕ ಅಮೃತ ದೇಸಾಯಿಯವರು ಧಾರವಾಡ ಶಹರದ 3ನೇ ವಾರ್ಡಿನಲ್ಲಿ ಅಂದಾಜು 3 ಕೋಟಿಯ ಹಲವು ಕಾಮಗಾರಿಗಳಿಗೆ ಭೂಮಿ ಪೂಜೆಯನ್ನ ಹಮ್ಮಿಕೊಳ್ಳಲಾಗಿದೆ.
ಸಾಧನಕೇರಿ ಉದ್ಯಾನವನ ಕಾಮಗಾರಿ, ಬಸವರೆಡ್ಡಿ ಕಾಲೇಜು ಹಿಂದುಗಡೆಯ ಗಾರ್ಡನ್ ಅಭಿವೃದ್ಧಿ ಕಾಮಗಾರಿ, ಕೆಎಚ್ ಬಿ ಕಾಲನಿಯ ದೊಡ್ಡನಾಯಕನಕೊಪ್ಪ ಬನಶ್ರೀ ನಗರದ ರಸ್ತೆ ಅಭಿವೃದ್ಧಿ, ಮಲಪ್ರಭಾ ನಗರದ ಗೊಲ್ಲರ ಕೆರೆ, ಗಟಾರ ಮತ್ತು ರಸ್ತೆ ನಿರ್ಮಾಣ ಕಾಮಗಾರಿ, ಸಿದ್ಧಾರ್ಥ ಕಾಲನಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕರು ಚಾಲನೆ ನೀಡಲಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ಯಿಯಲ್ಲಿ ಬರುವ ಗ್ರಾಮೀಣ ಕ್ಷೇತ್ರದ ವಾರ್ಡುಗಳನ್ನ ಮಾದರಿ ಮಾಡುವಲ್ಲಿ ಶಾಸಕ ಅಮೃತ ದೇಸಾಯಿ ಮುನ್ನುಗುತ್ತಿದ್ದಾರೆ.