ಹಾವೇರಿ: ಸರಾಯಿ ನಿಷೇಧ ಮಾಡಿ ಕುಟುಂಬ ಉಳಿಸಿ- ಮಕ್ಕಳೊಂದಿಗೆ ಹೋರಾಟ
ಹಾವೇರಿ: ಅಕ್ರಮವಾಗಿ ಮದ್ಯವನ್ನ ಮಾರಾಟ ಮಾಡುವುದು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿದ್ದು, ತಕ್ಷಣವೇ ಇದನ್ನ ನಿಲ್ಲಿಸಬೇಕೆಂದು ಆಗ್ರಹಿಸಿ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದ ಪ್ರಸಂಗ ಹಾವೇರಿ ಜಿಲ್ಲೆಯ ಹಿರೇಮುಗದುರ ಗ್ರಾಮದಲ್ಲಿ ನಡೆದಿದೆ.
ಹಳ್ಳಿಗಳಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ನಮ್ಮ ಕುಟುಂಬಗಳು ಒಡೆಯುತ್ತಿವೆ. ದಿನಾ ರಾತ್ರಿ ನಮ್ಮ ಗಂಡಂದಿರು ಕುಡಿದು ನಮ್ಮ ಮೇಲೆ ಕೈ ಮಾಡುತ್ತಾರೆ. ನಮ್ಮ ಕುಟುಂಬಗಳು ಬೀದಿಗೆ ಬರುತ್ತಿವೆ. ಸರಾಯಿಯನ್ನ ಸಂಪೂರ್ಣ ಬಂದ್ ಮಾಡಿ ಎಂದು ಎಚ್ಚರಿಸಿದರು.
ಬಂದ್ ಮಾಡದೇ ಹೋದರೆ ತೀವ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ ಮಹಿಳೆಯರು, ಮಹಿಳೆಯರ ನೋವಿಗೆ ತಕ್ಷಣವೇ ಸ್ಪಂಧಿಸಬೇಕೆಂದು ಒತ್ತಾಯಿಸಿದರು. ಗ್ರಾಮ ಪಂಚಾಯತಿ ಪಿಡಿಓಗೆ ಮನವಿ ಮಾಡಿದ ಮಹಿಳೆಯರು, ಅಕ್ರಮವಾಗಿ ಗ್ರಾಮಕ್ಕೆ ಬರುವ ಮದ್ಯವನ್ನ ಬರದಂತೆ ತಡೆಯಬೇಕೆಂದು ಆಗ್ರಹಿಸಿದರು.
                      
                      
                      
                      
                      
                        