ಶಾಸಕ ಶಂಕರ ಪಾಟೀಲ್ರು ‘ಆ’ ಮಹಾಸ್ವಾಮಿಗಳನ್ನ ಭೇಟಿಯಾಗಿದ್ದು ಯಾಕೆ ಗೊತ್ತಾ..?
ದಾವಣಗೆರೆ: ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಪಂಚಮಸಾಲಿ ಜಗದ್ಗುರು ಪೀಠಕ್ಕೆ ಭೇಟಿ ನೀಡಿ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳ ಆಶೀರ್ವಾದ ಪಡೆದರು.
ಬೆಂಗಳೂರಿನಿಂದ ಬರುವಾಗ ಹರಿಹರದಲ್ಲಿನ ಪೀಠಕ್ಕೆ ಭೇಟಿ ನೀಡಿದ ಶಂಕರ ಪಾಟೀಲಮುನೇನಕೊಪ್ಪ, ನಿಗಮದ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದರು.
ಶ್ರೀ ಪೀಠದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕ ಮುನೇನಕೊಪ್ಪ, ಸಮಾಜದ ಏಳಿಗೆಗಾಗಿ ಹಗಲಿರುಳು ಶ್ರಮಿಸುವುದಾಗಿ ಸ್ವಾಮೀಜಿಯವರಿಗೆ ಹೇಳಿದರು.
ಇದೇ ಸಮಯದಲ್ಲಿ ಶ್ರೀಗಳು ಕೂಡಾ, ತಾವು ರಾಜ್ಯದ ಏಳಿಗೆಗಾಗಿ ಜನಪರ ಕಾರ್ಯಗಳನ್ನ ಮಾಡುತ್ತ ಮುನ್ನಡೆಯಬೇಕು. ನಿಮ್ಮೊಂದಿಗೆ ಸದಾಕಾಲ ಸಮಾಜವೂ ಇರತ್ತೆ ಎಂದು ಆಶೀರ್ವಾದ ಮಾಡಿದರು.