ಧಾರವಾಡದ ಮಹಿಳಾ ಪೊಲೀಸ್ ಈಗ ಪಿಎಸೈ_ ಮಾದರಿಯಾದ ಮಹಿಳೆ- ಪೇಶನ್ಸ್ ಇಸ್ ಪವರ್
ಧಾರವಾಡ: ಸಾಧನೆ ಮಾಡಬೇಕೆಂಬ ಛಲವೊಂದಿದ್ದರೇ ಏನನ್ನಾದರೂ ಸಾಧಿಸಬಹುದು. ಆದರೆ, ಅದಕ್ಕೆ ತಾಳ್ಮೆ ಬಹುಮುಖ್ಯ ಎಂಬುದನ್ನರಿತ ನಾರಿಯೊಬ್ಬರು ಇದೀಗ ಸದ್ದಿಲ್ಲದೇ ಸಾಧನೆ ಮಾಡಿ, ಇತರರಿಗೂ ಮಾದರಿಯಾಗಿದ್ದಾರೆ. ಅದು ನಮ್ಮ ಧಾರವಾಡದ ನೆಲದಲ್ಲಿ..
ಹೌದು.. ಧಾರವಾಡ ಶಹರ ಠಾಣೆಯಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಆಗಿರುವ ಭಾರತಿ ಕುರಿ ಎಂಬುವವರೇ ಪಿಎಸೈ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಇನ್ನೇನು ಕೆಲವೇ ದಿನಗಳಲ್ಲಿ ಎರಡು ಸ್ಟಾರಗಳನ್ನ ಬುಜಕ್ಕೇರಿಸಿಕೊಳ್ಳಲಿದ್ದಾರೆ. ಅದು ಹೆಮ್ಮೆಯಿಂದ.
ಮೂಲತಃ ಬೆಳಗಾವಿ ಜಿಲ್ಲೆಯ ಹಾರೂಗೇರಿಯವರಾದ ಭಾರತಿ ಕುರಿ, 2016ರಲ್ಲಿಯೇ ಪೊಲೀಸ್ ಆಗಿ ನೇಮಕಗೊಂಡಿದ್ದರು. ಅದಾದ ನಂತರ 2017ರ ಅಕ್ಟೋಬರ್ ನಲ್ಲಿ ಧಾರವಾಡ ಶಹರ ಠಾಣೆಗೆ ನೇಮಕಗೊಂಡರು. ಅಂದಿನಿಂದ ಇಂದಿನವರೆಗೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಅವರ ಕನಸನ್ನ ಹಾಗೇಯೇ ಮುಂದುವರೆಸಿಕೊಂಡು ಬಂದಿದ್ದರು.
ಮೊದಲೇ ಪಿಎಸೈ ಆಗಬೇಕೆಂದು ಕನಸು ಕಂಡಿದ್ದ ಭಾರತಿ ಕುರಿ, ಮದುವೆಯಾಗಿ ಒಂದು ಹೆಣ್ಣು ಮಗುವಾದ ನಂತರವೂ ತಮ್ಮ ಕನಸನ್ನ ನನಸು ಮಾಡಿಕೊಳ್ಳುವುದಕ್ಕೆ ಮುಂದಾದರು. ಯಾವತ್ತೂ ತನ್ನ ಕನಸಿಗೆ ಮಗುವಾಗಲಿ, ಖಾಸಗಿ ಕೆಲಸ ಮಾಡುವ ಪತಿಯಾಗಲಿ ಅಡ್ಡಿಯಂದುಕೊಳ್ಳಲಿಲ್ಲ. ನಿರಂತರ ಪ್ರಯತ್ನದಿಂದ ಪಿಎಸೈ ಆಗಿದ್ದಾರೆ.
ಪಿಎಸೈ ಆಯ್ಕೆಯಾದ ನಂತರವೂ ಭಾರತಿ ಕುರಿ, ತಮ್ಮ ಕರ್ತವ್ಯವನ್ನ ಮರೆತಿಲ್ಲ. ಆಯ್ಕೆ ಪ್ರಕ್ರಿಯೆ ಹಾಗೂ ತರಬೇತಿಗೆ ಬುಲಾವ್ ಬರುವತನಕ ಇಂದೂ ಕೂಡಾ ಶಹರ ಠಾಣೆಯಲ್ಲಿ ಮಹಿಳಾ ಕಾನ್ಸಟೇಬಲ್ ಆಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ.
ತಮ್ಮ ಸಾಧನೆಗಾಗಿ ಯಾವೂ ಅಡ್ಡಿಯಾಗಬಾರದು ಮತ್ತೂ ಸಾಧಿಸುವುದಕ್ಕಾಗಿ ತಾಳ್ಮೆ ಬಹುಮುಖ್ಯ ಎಂದುಕೊಂಡಿರುವ ಭಾರತಿ ಕುರಿಯವರ ಮುಂದಿನ ಬದುಕು ಮತ್ತಷ್ಟು ಒಳ್ಳೆಯದಾಗಲಿ.