ಧಾರವಾಡದಲ್ಲಿ ಅಪಘಾತ-ಮಹಿಳೆ ಸಾವು-ಮತ್ತೋಬ್ಬ ಗಂಭೀರ
ಧಾರವಾಡ: ಸ್ಕೂಟಿಯಲ್ಲಿ ಹೊರಟಿದ್ದ ಇಬ್ಬರು ಆಯತಪ್ಪಿ ಕೆಳಗೆ ಬಿದ್ದ ತಕ್ಷಣವೇ ಟ್ರ್ಯಾಕ್ಟರ್ ಇಬ್ಬರು ಮೇಲೆ ಹರಿದು ಹೋದ ಪರಿಣಾಮ ಸ್ಥಳದಲ್ಲಿಯೇ ಮಹಿಳೆ ಸಾವನ್ನಪ್ಪಿದ್ದು, ವ್ಯಕ್ತಿಯೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಹೊಸಯಲ್ಲಾಪುರ ಪ್ರದೇಶದ ಬಳಿ ಸಂಭವಿಸಿದೆ.
ತರಕಾರಿ ವ್ಯಾಪಾರ ಮಾಡುತ್ತಿದ್ದ ಯಲ್ಲಮ್ಮ ದೊಡ್ಡಮನಿ ಕಾರವಾರಕ್ಕೆ ಹೋಗಲು, ಜಮೀರ ಎಂಬ ವ್ಯಕ್ತಿಯಿಂದ ಸ್ಕೂಟಿಯಲ್ಲಿ ಡ್ರಾಫ್ ತೆಗೆದುಕೊಳ್ಳುತ್ತಿದ್ದರು. ಆಗ, ಸ್ಕೂಟಿ ಕಾಂಕ್ರೀಟ್ ರಸ್ತೆಯ ತುದಿಯಲ್ಲಿ ಜಾರಿ ಈ ದುರ್ಘಟನೆ ನಡೆದಿದೆ.
ಸ್ಕೂಟಿಯಲ್ಲಿದ್ದ ಜಮೀರಗೆ ಗಂಭೀರವಾಗಿ ಗಾಯವಾಗಿದ್ದು, ಹುಬ್ಬಳ್ಳಿಯ ಕಿಮ್ಸಗೆ ರವಾನೆ ಮಾಡಲಾಗಿದೆ. ಹೊಸಯಲ್ಲಾಪುರ ಬಳಿಯ ಸುಣ್ಣದ ಭಟ್ಟಿಯ ನಿವಾಸಿಯಾಗಿದ್ದ ಯಲ್ಲಮ್ಮ ದೊಡ್ಡಮನಿ ಮರಣೋತ್ತರ ಪರೀಕ್ಷೆ ನಡೆದಿದೆ. ಧಾರವಾಡ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.